ರಾಜಕೀಯ ದಿಕ್ಕನ್ನು ನಿರ್ಧರಿಸುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗಳು ಕೇವಲ ಸಂಘಟನಾ ಮಟ್ಟದ ಪ್ರಕ್ರಿಯೆಯಲ್ಲ ಅವು ಭವಿಷ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವ ಪ್ರಮುಖ ಘಟ್ಟಗಳಾಗಿವೆ. ವಿಶೇಷವಾಗಿ ಹಿರಿಯೂರು ಕ್ಷೇತ್ರದ ಪರಿಧಿಯಲ್ಲಿ ನೋಡಿದರೆ, ಈ ಚುನಾವಣೆಯ ಪ್ರಭಾವವು 2028ರ ವಿಧಾನಸಭಾ ಚುನಾವಣೆಯ ಮೇಲೆ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಜಿಲ್ಲಾ ಮಟ್ಟದಲ್ಲಿ ಈ ಚುನಾವಣೆಯಲ್ಲಿ ಜಯಶೀಲರಾಗುವ ನಾಯಕರು ಕೇವಲ ಒಂದು ಹುದ್ದೆಯನ್ನು ಗೆಲ್ಲುವುದಷ್ಟೇ ಅಲ್ಲ, ತಮ್ಮ ಪ್ರಭಾವ, ಸಂಘಟನೆ ಶಕ್ತಿ ಹಾಗೂ ಜನಮೆಚ್ಚುಗೆಯನ್ನು ಸಾಬೀತುಪಡಿಸುತ್ತಾರೆ. ಈ ಗೆಲುವು ಅವರಿಗೆ ರಾಜಕೀಯವಾಗಿ ಹೊಸ ಬಾಗಿಲುಗಳನ್ನು ತೆರೆಯುವುದರ ಜೊತೆಗೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಯಕತ್ವದ ಮುಂಚೂಣಿಯಲ್ಲಿ ನಿಲ್ಲುವ ಅವಕಾಶವನ್ನೂ ನೀಡುತ್ತದೆ.

- Advertisement - 

ಇದರಿಂದ, ಈ ಚುನಾವಣೆಯನ್ನು ಒಂದು ರೀತಿಯಲ್ಲಿ ರಾಜಕೀಯ ಸೆಮಿಫೈನಲ್ಎಂದು ಕರೆಯಬಹುದು. ಇಲ್ಲಿ ಸಾಧನೆಯುಳ್ಳವರು, ಜನರೊಂದಿಗೆ ನಿಕಟ ಸಂಪರ್ಕ ಹೊಂದಿದವರು ಹಾಗೂ ಸಂಘಟನಾ ಬಲವನ್ನು ಕಟ್ಟಿಕೊಂಡವರು 2028ರ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುವುದು ಖಚಿತ.

ಹೀಗಾಗಿ, ಒಕ್ಕಲಿಗರ ಸಂಘದ ಈ ಚುನಾವಣೆಯು ಕೇವಲ ಸಂಘದ ಒಳರಾಜಕೀಯವಲ್ಲ, ಹಿರಿಯೂರು ಕ್ಷೇತ್ರದ ಭವಿಷ್ಯದ ನಾಯಕತ್ವವನ್ನು ರೂಪಿಸುವ ದಿಕ್ಕು ತೋರಿಸುವ ಪ್ರಮುಖ ದಿಕ್ಸೂಚಿಯಾಗಲಿದ್ದಾರೆ…….
ಲೇಖನ:ಕೆ.ಟಿ ಶ್ರೀನಿವಾಸ್, ಬೆಂಗಳೂರು

- Advertisement - 

Share This Article
error: Content is protected !!
";