ರೈತರ ಬ್ಯಾಂಕ್ ಖಾತೆಗಳಿಗೆ ವಿಮೆ ಹಣ ಜಮಾಕ್ಕೆ ಒತ್ತಾಯಿಸಿ ಪ್ರತಿಭಟನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬೆಳೆ ವಿಮೆ ಪಾವತಿಸಿರುವ ಜಿಲ್ಲೆಯ ರೈತರ ಬ್ಯಾಂಕ್ ಖಾತೆಗಳಿಗೆ ವಿಮೆ ಹಣ ಜಮೆ ಆಗಿಲ್ಲದಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲುಕಿನ ರೈತರು ೨೦೨೫-೨೬ ನೇ ಸಾಲಿನ ಬೆಳೆವಿಮೆಯನ್ನು ಸರ್ಕಾರಕ್ಕೆ ಪಾವತಿಸಿದ್ದರು ಹಣ ರೈತರಿಗೆ ತಲುಪಿಲ್ಲ. ತಕ್ಷಣವೆ ಪಾವತಿಯಾಗಬೇಕು. ಇಲ್ಲವಾದಲ್ಲಿ ಕೆಡಿಪಿ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳಿಗೆ ಘೇರಾವ್ ಹಾಕಲಾಗುವುದೆಂದು ಪ್ರತಿಭಟನಾನಿರತ ರೈತರು ಜಿಲ್ಲಾಡಳಿತವನ್ನು ಎಚ್ಚರಿಸಿದರು.

- Advertisement - 

ಬೆಳೆವಿಮೆಗೆ ಒತ್ತಾಯಿಸಿ ಕಳೆದ ೨ ರಂದು ಚಳ್ಳಕೆರೆಯಲ್ಲಿ ಉಪವಾಸ ಸತ್ಯಾಗ್ರಹ ಕುಳಿತಾಗ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ತಹಶೀಲ್ದಾರ್ ಇವರುಗಳು ಸ್ಥಳಕ್ಕೆ ಆಗಮಿಸಿ ಮಾ.೧೫ ರೊಳಗೆ ಬೆಳೆವಿಮೆ ಹಣ ಪಾವತಿಸುತ್ತೇವೆ. ಉಪವಾಸ ಕೈಬಿಡಿ ಎಂದು ಮನವೊಲಿಸಿದ ಪರಿಣಾಮ ಸತ್ಯಾಗ್ರಹದಿಂದ ಹಿಂದೆ ಸರಿದೆವು. ಆದರೆ ಇದುವರೆವಿಗೂ ಬೆಳೆವಿಮೆ ರೈತರ ಖಾತೆಗಳಿಗೆ ಜಮಾ ಆಗಿಲ್ಲ. ಬೆಳೆ ನಷ್ಟ ಪರಿಹಾರವು ಸಿಕ್ಕಿಲ್ಲ. ಬೆಳೆವಿಮೆ ಕಟ್ಟಿಸಿಕೊಂಡ ಕಂಪನಿಗಳು ಕೂಡ ರೈತರಿಗೆ ಮೋಸ ಮಾಡುತ್ತಿವೆ. ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಕೆಲವು ರೈತರಿಗೆ ಫೆ.೨ ರಂದು ಬೆಳೆವಿಮೆ ಹಣ ಪಾವತಿಯಾಗಿದೆ. ಉಳಿದ ರೈತರಿಗೆ ಏಕೆ ವಿಮೆ ಹಣ ಕೈಸೇರಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಧನಂಜಯ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು

- Advertisement - 

ಎಂ.ಬಸಪ್ಪ, ಅಖಂಡ ಕರ್ನಾಟಕ ರೈತ ಸಂಘದ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ, ರಾಮಚಂದ್ರಪ್ಪ, ತಿಮ್ಮಣ್ಣ, ತಾಲ್ಲೂಕು ಅಧ್ಯಕ್ಷ ಟಿ.ಹಂಪಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮಲ್ಲಿಕಾರ್ಜುನ ಡಿ.ಎಸ್.ಹಳ್ಳಿ ಇನ್ನು ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
error: Content is protected !!
";