ಭಾವಾಭಿವ್ಯಕ್ತಿಯ ಜೊತೆಗೆ ಮನುಷ್ಯ ಸಂವೇದನೆಯೂ ಮುಖ್ಯ, ಶೂದ್ರ ತಪಸ್ವಿ ನಾಟಕ ಪ್ರದರ್ಶನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮನುಷ್ಯ ಸಂವೇದನೆಯ ಅಭಿವ್ಯಕ್ತಿ ರಂಗಕಲೆಯ ಅನನ್ಯ ಗುಣವಾಗಿದ್ದು, ನಿತ್ಯ ಬದುಕಿನ ಹಲವು ಸಂವೇದನೆಗಳು ಹಾಗೂ ಭಾವನೆಗಳ ಮಿಳಿತವೇ ನಾಟಕದ ನೈಜ ಸತ್ವವಾಗಿರುತ್ತದೆ ಎಂದು ಪ್ರೆಸಿಡೆನ್ಸಿ ಕಾಲೇಜಿನ ಪ್ರಾಧ್ಯಾಪಕ ಸಿ.ಪೂಜಶ್ರೀ ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ, ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಶ್ರೀ ದೇವರಾಜ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಹಯೋಗದಲ್ಲಿ ಬುಧವಾರ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಡೆದ ಕುವೆಂಪು ಅವರ ಶೂದ್ರ ತಪಸ್ವಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

- Advertisement - 

ದಿನನಿತ್ಯದ ಬದುಕು ಮತ್ತು ಕಲಿಕೆಯಲ್ಲಿ ರಂಗಭೂಮಿಯ ಮಹತ್ವ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದ ಅವರು, ರಂಗಕಲೆ ಎಲ್ಲ ವಲಯಗಳನ್ನೂ ಒಳಗೊಂಡ ಸಮಷ್ಠಿ ರೂಪ. ಬದುಕಿನ ಕಲೆ ಎಂದರೂ ತಪ್ಪಾಗಲಾರದು. ಭಾವಾಭಿವ್ಯಕ್ತಿಯ ಜೊತೆಗೆ ಸಾಮಾಜಿಕ ಕಾಳಜಿ ಮತ್ತು ಸಾಂಸ್ಕೃತಿಕ ಸಂವೇದನೆಯನ್ನು ಒಳಗೊಂಡ ಮಾಧ್ಯಮವಾಗಿ ಹೆಗ್ಗಳಿಕೆ ಪಡೆದಿದೆ ಎಂದು ಅಭುಪ್ರಾಯಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಡಾ.ಟಿ.ಎಚ್.ಲವಕುಮಾರ್‌, ಪ್ರಸ್ತುತ ವರ್ಷದ ಅಂತಾರಾಷ್ಟ್ರೀಯ ರಂಗಭೂಮಿ ದಿನಾಚರಣೆಯ ರಂಗ ಸಂದೇಶವನ್ನು ಪ್ರಸ್ತುತಪಡಿಸಿದರು. ಯುವಜನತೆಯನ್ನು ಒಳಗೊಂಡ ರಂಗಪರಂಪರೆಯ ಪರಿಕಲ್ಪನೆಯನ್ನು ನಾಟಕ ಅಕಾಡೆಮಿ ಪ್ರಧಾನ ಆದ್ಯತೆಯಾಗಿ ಪರಿಗಣಿಸಿ ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗ ಚಟುವಟಿಕೆಗಳ ಬಗ್ಗೆ ಆಸಕ್ತಿ ವೃದ್ದಿಸುವ ಕೆಲಸ ಮಾಡುತ್ತಿದೆ ಎಂದರು.

- Advertisement - 

ಇದೇ ವೇಳೆ ರಂಗ ಕಲಾವಿದರಾದಎನ್.ಆನಂದಮೂರ್ತಿ ಮತ್ತು ಜಿ.ಬಿ.ರಂಜಿತ್‌ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಎನ್.ಹರ್ಷಿತ, ಡಿ.ಎ.ಮೌಲ್ಯ ಮತ್ತು ಪಿ.ಸಿಂಧು ಅವರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಕೆ.ದಕ್ಷಿಣಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬೆಂ.ಗ್ರಾ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಡಿ.ಕೆಂಪಣ್ಣ, ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ, ಕೊನಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎನ್.ಕಾಂತರಾಜ್‌, ಕಲಾವಿದರಾದ ಸಿ.ವಿ.ಲೋಕೇಶ್, ಎಂ.ಪಿ.ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

ಶೂದ್ರತಪಸ್ವಿ ನಾಟಕ ಪ್ರದರ್ಶನ:
ಇದೇ ವೇಳೆ ಯಲಹಂಕದ ರಂಗಸಿರಿ ಕಲಾವಿದರು ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ಶೂದ್ರ ತಪಸ್ವಿ ನಾಟಕವನ್ನು ಎಂ.ಮಧು ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಮಹತ್ವದ ಆಶಯವುಳ್ಳ ನಾಟಕವನ್ನು ಪ್ರಬುದ್ದ ಅಭಿನಯ ಮತ್ತು ಉತ್ತಮ ಹಿನ್ನಲೆ ಸಂಗೀತದ ಮೂಲಕ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

Share This Article
error: Content is protected !!
";