ಒಂದನೇ ತರಗತಿ ಪ್ರವೇಶಕ್ಕೆ 60 ದಿವಸಗಳ ಸಡಿಲಿಕೆ- ಸಚಿವ ಎಸ್ ಮಧು ಬಂಗಾರಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಒಂದನೇ ತರಗತಿ ಪ್ರವೇಶಕ್ಕೆ 60 ದಿವಸಗಳ ಸಡಿಲಿಕೆ ನೀಡಲಾಗಿದೆ ಎಂದು – ಸಚಿವ ಎಸ್ ಮಧು ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ತಿಳಿಸಿದರು. ವಿಧಾನಸಭೆಯ ಕಲಾಪದಲ್ಲಿ ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ತುಂಬಿರಬೇಕು ಎಂಬ ನಿಯಮವಿತ್ತು.

ಪೋಷಕರು ಗೊಂದಲದಲ್ಲಿದ್ದು ವಯೋಮಿತಿಯನ್ನು ಸಡಲಿಸಬೇಕೆಂದು ಮನವಿ ಸಲ್ಲಿಸಿರುತ್ತಾರೆ. ಈ ವಿಷಯದ ಕುರಿತು ಚರ್ಚಿಸಿ ಕರ್ನಾಟಕ ಶಿಕ್ಷಣ ಕಾಯ್ದೆ 1963ರಂತೆ ಒಂದನೇ ತರಗತಿ ಪ್ರವೇಶಕ್ಕೆ 60 ದಿವಸಗಳ ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

- Advertisement - 

ಮುಂದಿನ ದಿನಗಳಲ್ಲಿ ಎಲ್.ಕೆ.ಜಿ. ಹಾಗೂ ಯು.ಕೆ.ಜಿ ತರಗತಿಗಳಿಗೂ ಸಹ ಪ್ರವೇಶದ ವಯೋಮಿತಿಯನ್ನು ಸಡಿಲಗೊಳಿಸಲು ಹೊಸದಾಗಿ ಕಾನೂನು ರೂಪಿಸಲಾಗುವುದು ಎಂದು ವಿಧಾನಸಭೆಯಲ್ಲಿ ತಿಳಿಸಿದರು.

 

- Advertisement - 

Share This Article
error: Content is protected !!
";