ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2026-27ನೇ ಸಾಲಿಗೆ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಮರ್ಪಕವಾಗಿ ವಸೂಲಿ ಮಾಡುವ ನಿಟ್ಟಿನಲ್ಲಿ, ಚಿತ್ರದುರ್ಗ ನಗರಸಭೆ ಕಾರ್ಯಾಲಯ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 06 ಅರ್ಜಿ ಸಲ್ಲಿಸಲು ಕೊನೆಯ ದಿನ.
ಈ ಯೋಜನೆಯಡಿ ಆಯ್ಕೆಯಾಗ ಬಯಸುವ ಮಹಿಳಾ ಸ್ವ-ಸಹಾಯ ಸಂಘಗಳು ಈಗಾಗಲೇ ಡೇ-ನಲ್ಮ್ ಅಭಿಯಾನದಡಿ ನೋಂದಾಯಿಸಿಕೊಂಡಿರಬೇಕು ಹಾಗೂ ಪಂಚಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸುತ್ತಿರಬೇಕು. ಸಂಘದ ಸದಸ್ಯರು ಕನಿಷ್ಠ 7ನೇ ತರಗತಿಯವರೆಗೆ ಶಿಕ್ಷಣ ಮತ್ತು ಎಲೆಕ್ಟ್ರಾನಿಕ್ ಪರಿಕರಗಳ ಬಳಕೆ ಗೊತ್ತಿರಬೇಕು. ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆ ಹೊಂದಿರಬೇಕು. ಬ್ಯಾಂಕಿನಲ್ಲಿ ತಮ್ಮ ಖಾತೆಯಲ್ಲಿ ಸಾಲ ಪಡೆದು ನಿಯಮಿತವಾಗಿ ಮರು ಪಾವತಿ ಮಾಡಿರಬೇಕು.
ಹೆಚ್ಚಿನ ಮಾಹಿತಿಗಾಗಿ ಆಸಕ್ತ ಮತ್ತು ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳು ಚಿತ್ರದುರ್ಗ ನಗರಸಭೆ ಕಚೇರಿಯ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯಕ್ತರು ತಿಳಿಸಿದ್ದಾರೆ.

