ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ ಕಾಳಸಂತೆಯಲ್ಲಿ ಮಾರಾಟ- ಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ ಆಗ್ರಹ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಅಭಾವವನ್ನು ಬಂಡವಾಳ ಮಾಡಿಕೊಂಡು, ಗೃಹ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ಖಂಡಿಸಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

​​ಅಕ್ರಮ ಬಳಕೆ: ಗೃಹ ಬಳಕೆಗಾಗಿ ಮೀಸಲಾದ ಸಿಲಿಂಡರ್‌ಗಳನ್ನು ಹೋಟೆಲ್ ಹಾಗೂ ಇನ್ನಿತರ ವಾಣಿಜ್ಯ ಉದ್ದೇಶಗಳಿಗೆ ಕಾನೂನುಬಾಹಿರವಾಗಿ ಬಳಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಸಿಲಿಂಡರ್ ಲಭ್ಯತೆ ಕಡಿಮೆಯಾಗಿ ತೊಂದರೆಯಾಗುತ್ತಿದೆ.

- Advertisement - 

​ಕಪ್ಪು ಮಾರುಕಟ್ಟೆ ಹಾವಳಿ: ಮಾರುಕಟ್ಟೆಯಲ್ಲಿ ಗ್ಯಾಸ್ ಅಭಾವ ಇರುವುದನ್ನು ಬಳಸಿಕೊಂಡು, ಗೃಹ ಬಳಕೆಯ ಸಿಲಿಂಡರ್‌ಗಳನ್ನು 2,000 ವರೆಗೆ ಹೆಚ್ಚಿನ ಬೆಲೆಗೆ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ ಅಧ್ಯಕ್ಷೆ ಪಾರ್ವತಿ ಆರೋಪಿಸಿದರು.

​ಸಾರ್ವಜನಿಕರಿಗೆ ತೊಂದರೆ: ಈ ಅಕ್ರಮ ಚಟುವಟಿಕೆಗಳಿಂದಾಗಿ ಆಸ್ಪತ್ರೆಗಳು, ಶಾಲೆ-ಕಾಲೇಜು ಹಾಸ್ಟೆಲ್‌ಗಳು, ಅಂಗನವಾಡಿ ಹಾಗೂ ಇಂದಿರಾ ಕ್ಯಾಂಟೀನ್‌ಗಳಿಗೆ ಸಮರ್ಪಕವಾಗಿ ಅನಿಲ ಸರಬರಾಜು ಆಗುತ್ತಿಲ್ಲ ಎಂದು ಪಾರ್ವತಿ ಅವರು ದೂರಿದರು.

- Advertisement - 

​ಸಂಘಟನೆಯ ಒತ್ತಾಯ:
​ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲೆಯಾದ್ಯಂತ ತಪಾಸಣೆ ನಡೆಸಿ, ಗೃಹ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಡುವ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಅಡಿಯಲ್ಲಿ ಪ್ರಕರಣ ದಾಖಲಿಸಬೇಕು.

ಅಕ್ರಮದಲ್ಲಿ ಭಾಗಿಯಾದ ಏಜೆನ್ಸಿಗಳ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಸಂಘಟನೆಯ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಗೌರಮ್ಮ, ನಾಗಮಣಿ, ನೇತ್ರಾವತಿ, ಸಂಘಟನಾ ಕಾರ್ಯದರ್ಶಿ ಶಬಾನಭಾನು, ಸಾವಿತ್ರಮ್ಮ, ಶೋಭ, ಕವಿತ, ಪ್ರಭಾ, ನಿರ್ದೇಶಕಿ ಹೀನಾ ಕೌಸರ್, ತೇಜೇಶ್ವರಿ, ಹಾಗೂ ನಾಗಮಣಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

 

 

Share This Article
error: Content is protected !!
";