ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಬೆಂಗಳೂರು ರಸ್ತೆಯಲ್ಲಿರುವ ಶಿಥಿಲಗೊಂಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಾಲಯವನ್ನು ನೆಲಸಮಗೊಳಿಸುವುದರಲ್ಲಿ ನಗರಸಭೆ ಆಡಳಿತ ತೆರವು ಕಾರ್ಯಚರಣೆಗೆ ಚಾಲನೆ ನೀಡಿದ್ದು, ಪೌರಾಯುಕ್ತೆ ಡಾ.ನಾಗವೇಣಿ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಕಾರ್ಯಚರಣೆ ಆರಂಭವಾಗಿದೆ. ಮಹದೇವಿ ರಸ್ತೆಯ ನಾಲ್ಕು ಶಿಥಿಲಗೊಂಡ ನಗರಸಭೆಯ ಮಳಿಗೆಗಳನ್ನು ತೆರವುಗೊಳಿಸಲಾಯಿತು.
ಜೆಸಿಬಿ ವಾಹನ ಪ್ರತಿನಿತ್ಯ ರಸ್ತೆ ಬಂದಕೂಡಲೇ ವರ್ತರಲ್ಲಿ ಡವ, ಡವ ಆರಂಭವಾಗುತ್ತದೆ. ಯಾವ ಕಟ್ಟಡವನ್ನು ಹೊಡೆಯುತ್ತೇರೆಂಬ ಆತಂಕ ಎಲ್ಲರಲ್ಲೂ ಇದೆ. ಈ ಮಧ್ಯೆ ಕಳೆದ ೨೫ರಂದು ಮೂರು ದಿನಗಳ ಕಾಲ ಕಾಲಾವಕಾಶ ನೀಡಿದ್ದು ಮಾರ್ಚ್ ೩೦ರ ಸೋಮವಾರ ದೊಡ್ಡ ಪ್ರಮಾಣದಲ್ಲಿ ಕಾರ್ಯಚರಣೆ ಆರಂಭಿಸಲು ನಗರಸಭೆ ಯೋಜನೆ ರೂಪಿಸಿದೆ. ಈ ಮಧ್ಯೆ ಇಂದಿರಾ ಶಾಪಿಂಕ್ ಕಾಂಪ್ಲೆಕ್ಸ್ ೯೪ ಬಾಡಿಗೆದಾರರು ಪೌರಾಯುಕ್ತರನ್ನು ಭೇಟಿ ಮಾಡಿ ಕಡೆಪಕ್ಷ ೧೫ ದಿನಗಳ ಕಾಲವಾಕಾಶ ನೀಡಿದರೆ ಮಳಿಗೆಯ ಕೀ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಬಾಡಿಗೆದಾರರಿಗೆ ಸೂಚಿಸಿದ ಪೌರಾಯುಕ್ತೆ ಡಾ.ನಾಗವೇಣಿ ತಮ್ಮ ಮನವಿ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ನಗರಸಭೆ ಯಾವುದೇ ಕಾರಣಕ್ಕೂ ಕಾರ್ಯಚರಣೆ ನಿಲ್ಲಿಸಲು ಸಾಧ್ಯವಿಲ್ಲ. ಮಳಿಗೆಗಳು ನೆಲಸಮಗೊಂಡ ನಂತರವೇ ಮಲ್ಟಿ ಕಾಂಪ್ಲೆಕ್ಸ್ ಬ್ಲೂಪ್ರಿಂಟ್ ಸಿದ್ದಪಡಿಸಿ ಹಣಮಂಜೂರಾತಿ ಪಡೆಯಲಾಗುವುದು. ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆಯ ಫಲವಾಗಿ ಕಟ್ಟಡ ನಿರ್ಮಾಣ ಕಾರ್ಯ ಜರೂರಾಗಿ ನಡೆಯಲಿದೆ. ಆದಷ್ಟು ಬೇಗ ಹೊಸಮಳಿಗೆ ನಿರ್ಮಿಸಿ ನಗರಸಭೆಯ ನಿಯಮಗಳನುಸಾರ ನೀಡುವ ಸಾಧ್ಯತೆ ಇದ್ದು, ಈ ಬಗ್ಗೆ ಹಾಲಿಬಾಡಿಗೆದಾರರು ಸಹ ಚಿಂತನೆ ನಡೆಸಿ ಆದಷ್ಟು ಬೇಗ ಮಳಿಗೆಗಳ ಕೀಯನ್ನು ಹಸ್ತಾಂತರ ಮಾಡುವಂತೆ ಸೂಚಿಸಿದರು.
ನಗರಸಭೆ ಆರಂಭ ಪ್ರಾರಂಭಿಸಿದ ಕಾರ್ಯಚರಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ಸುಮಾರು ೫೦ ವರ್ಷಗಳಿಂದ ಬಾಡಿಗೆದಾರರು ನಗರಸಭೆ ಆಡಳಿತಕ್ಕೆ ಹೊಡೆತ ನೀಡಿದ್ದಾರೆ. ನೂತನ ಕಟ್ಟಡ ನಿರ್ಮಾಣಗೊಂಡರೆ ಇನ್ನೂ ಹೆಚ್ಚಿನ ವರ್ತಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ.
“ಕಾಂಗ್ರೆಸ್ ಪಕ್ಷ ಸುಮಾರು ೫೦ವರ್ಷಗಳಿಗೂ ಹೆಚ್ಚು ಕಾರ್ಯ ಕಚೇರಿಯನ್ನು ಆರಂಭಿಸಿ ಕಾರ್ಯನಿರ್ವಹಿಸುತ್ತು. ಪ್ರಾರಂಭದಲ್ಲೇ ಪಕ್ಷದ ಕಚೇರಿ ಕಟ್ಟಡವನ್ನು ತೆರವುಗೊಳಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತವಿದ್ದು, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದರೂ ಯಾವುದೇ ವಿರೋಧ ವ್ಯಕ್ತಪಡಿಸದೆ ಸಹಕಾರ ನೀಡಿದೆ. ಇದನ್ನು ಮನಗಾಣಬೇಕು”.
ಬಿ.ಟಿ.ರಮೇಶ್ಗೌಡ, ಎಸ್.ಎಚ್.ಸೈಯದ್, ಕೆ.ವೀರಭದ್ರಯ್ಯ, ಜಿ.ಟಿ.ಶಶಿಧರ, ಕಾಂಗ್ರೆಸ್ ಪಕ್ಷದ ಮುಖಂಡರು.

