ಹದಡಿ ಗ್ರಾಮದಲ್ಲಿ ಸಮರ್ಥ್ ಶಾಮನೂರು ಅಬ್ಬರದ ಪ್ರಚಾರ: ಮತದಾರರಿಂದ ಅಭೂತಪೂರ್ವ ಬೆಂಬಲ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ​ದಾವಣಗೆರೆ:
ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ ಅವರು ಶನಿವಾರ ಹಮ್ಮಿಕೊಂಡಿದ್ದ ಕಾಲ್ನಡಿಗೆ ಪ್ರಚಾರ ಕಾರ್ಯಕ್ರಮಕ್ಕೆ ಮತದಾರರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಯಿತು.

​ಗ್ರಾಮದ ಪ್ರಮುಖ ಬೀದಿಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದ ಅಭ್ಯರ್ಥಿ ಸಮರ್ಥ್ ಅವರಿಗೆ ಸ್ಥಳೀಯರು ಹೂಮಳೆಗರೆದು, ಆರತಿ ಎತ್ತಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಗ್ರಾಮದಲ್ಲಿ ನೆರೆದಿದ್ದ ಜನಸ್ತೋಮ ನೀಡಿದ ಬೆಂಬಲ ಹಾಗೂ ತೋರಿದ ಪ್ರೀತಿಗೆ ನಾನು ಸದಾ ಚಿರರುಣಿಯಾಗಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ” ಎಂದು ಭರವಸೆ ನೀಡಿದರು.

- Advertisement - 

​ಕ್ರಮ ಸಂಖ್ಯೆ 3ಕ್ಕೆ ಮತ ನೀಡಲು ಮನವಿ:
ಚುನಾವಣಾ ಕಣದಲ್ಲಿರುವ ತಮ್ಮ ಕ್ರಮ ಸಂಖ್ಯೆ – 3 ಕ್ಕೆ ಮತ ನೀಡಿ, ಅತ್ಯಧಿಕ ಬಹುಮತದಿಂದ ಗೆಲ್ಲಿಸುವಂತೆ ಅವರು ಮತದಾರರಲ್ಲಿ ವಿನಂತಿಸಿದರು. ಪ್ರಚಾರದ ಉದ್ದಕ್ಕೂ ಕಾರ್ಯಕರ್ತರ ಘೋಷಣೆಗಳು ಮತ್ತು ಜನರ ಉತ್ಸಾಹ ಎದ್ದು ಕಾಣುತ್ತಿತ್ತು. ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

 

- Advertisement - 

 

 

Share This Article
error: Content is protected !!
";