ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್-೯ ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ರನ್ನು ಬಹುಮತಗಳಿಂದ ಗೆಲ್ಲಿಸುವಂತೆ ಭಾರತೀಯ ರಾಷ್ಟ್ರೀಯ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಸ್.ಎಚ್.ಸೈಯದ್ ಮನವಿ ಮಾಡಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಪಕ್ಷದ ನಾಯಕರು ಸಮರ್ಥ್‌ಗೆ ಟಿಕೆಟ್ ನೀಡಿರುವುದು ಸೂಕ್ತವಾಗಿದೆ. ಈಗಾಗಲೆ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಆರಂಭಗೊಂಡಿದೆ. ಸದ್ಯದಲ್ಲಿಯೇ ಚಳ್ಳಕೆರೆಯಿಂದ ತಂಡ ದಾವಣಗೆರೆಗೆ ಹೋಗಿ ಅಭ್ಯರ್ಥಿ ಪರ ಮತಯಾಚಿಸಲಿದ್ದೇವೆಂದು ತಿಳಿಸಿದರು.
ಹಿಂದಿನಿಂದಲೂ ಡಾ.ಶಾಮನೂರು ಶಿವಶಂಕರಪ್ಪನವರ ಕುಟುಂಬ ಕಾಂಗ್ರೆಸ್‌ಗೆ ಮೀಸಲಾಗಿದೆ. ಬಿಜೆಪಿ.ಯ ಯಾವ ಆಸೆ ಆಮಿಷಗಳಿಗೂ ಬಲಿಯಾಗದೆ ಪಕ್ಷಕ್ಕೆ ನಿಷ್ಟರಾಗಿದ್ದಾರೆ. ಕೋಮು ಸೌಹಾರ್ಧತೆಗೆ ಮೊದಲಿನಿಂದಲೂ ಒತ್ತು ನೀಡುತ್ತ ಬರುತ್ತಿರುವ ಶಾಮನೂರು ಶಿವಶಂಕರಪ್ಪನವರ ಕುಟುಂಬದ ಕುಡಿ ಸಮರ್ಥ್‌ಗೆ ಮತ ನೀಡಿ ಗೆಲ್ಲಿಸಿ. ವಿರೋಧಿಗಳ ಭಾವುಕ ಮಾತುಗಳಿಗೆ ಮರುಳಾಗಬೇಡಿ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ವಿನಂತಿಸಿದರು.
ಎಲ್.ಐ.ಸಿ.ಬಶೀರ್‌ಹಯಾತ್, ಎಂ.ದಾದಾಪೀರ್, ಮಹಮದ್ ಇಸ್ಮಾಯಿಲ್ ಪಾಷ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

