ಯುದ್ಧದ ಕಾರ್ಮೋಡದ ನಡುವೆ ಮಹಾವೀರರ ಶಾಂತಿ ಮಂತ್ರ ಅನಿವಾರ್ಯ: ಸುರೇಶ್ ಎನ್. ಋಗ್ವೇದಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಇಡೀ ಜಗತ್ತು ಇಂದು ಸ್ವಾರ್ಥ ಮತ್ತು ಯುದ್ಧದ ಭೀತಿಯಲ್ಲಿ ಬದುಕುತ್ತಿದ್ದು
, ಇಂತಹ ಸಂದರ್ಭದಲ್ಲಿ ಭಗವಾನ್ ಮಹಾವೀರರು ಬೋಧಿಸಿದ ಶಾಂತಿ ಮತ್ತು ಅಹಿಂಸೆಯ ತತ್ತ್ವಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಸಂಸ್ಕೃತಿ ಚಿಂತಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

​ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕಸಾಪ ವತಿಯಿಂದ ಆಯೋಜಿಸಲಾಗಿದ್ದ “ವರ್ಧಮಾನ ಮಹಾವೀರರ ಕೊಡುಗೆಗಳು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

- Advertisement - 

​​ವಿಶ್ವಗುರು ಭಾರತ: ಭಾರತವು ಶಾಂತಿಯ ಶಕ್ತಿಯಾಗಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ. ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ಸಕಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಸಾರಿದ ಮಹಾನ್ ಶಾಂತಿದೂತರು ಎಂದು ಋಗ್ವೇದಿ ಬಣ್ಣಿಸಿದರು.

​ತ್ಯಾಗ ಮತ್ತು ಜ್ಞಾನ: ಅರಮನೆಯ ವೈಭವವನ್ನು ತ್ಯಜಿಸಿ 12 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದ ಮಹಾವೀರರು, ಆತ್ಮಕಲ್ಯಾಣದ ಜೊತೆಗೆ ಜಗತ್ತಿನ ಕಲ್ಯಾಣವೇ ನಮ್ಮ ಕರ್ತವ್ಯವಾಗಬೇಕು ಎಂಬ ಸರಳ ಸತ್ಯವನ್ನು ಬೋಧಿಸಿದರು.

- Advertisement - 

​ಅಹಿಂಸೆಯೇ ಪರಮಧರ್ಮ: ಕಾರ್ಯಕ್ರಮ ಉದ್ಘಾಟಿಸಿದ ಕಸ್ತೂರಿ ಕನ್ನಡ ಸಂಘದ ಮುಖಂಡ ಬೋಧಿ ಚೀಟು ಲಿಂಗರಾಜು, ಮಹಾವೀರರ ಅಹಿಂಸೆ ಮತ್ತು ಸರಳ ಜೀವನದ ಸಂದೇಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.

​ಮಾನವೀಯ ಮೌಲ್ಯ: ನಗರಸಭಾ ಮಾಜಿ ಸದಸ್ಯೆ ಪದ್ಮ ಪುರುಷೋತ್ತಮ್ ಮಾತನಾಡಿ, ಮನುಷ್ಯ ಇತರರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು, ಅಹಿಂಸೆ ನಮ್ಮ ಬದುಕಿನ ದಾರಿಯಾಗಲಿ ಎಂದು ಆಶಿಸಿದರು.

​ಗಣ್ಯರ ಉಪಸ್ಥಿತಿ:
​ಕಾರ್ಯಕ್ರಮದಲ್ಲಿ ಕಸಾಪ ನಿರ್ದೇಶಕ ಬಿ.ಕೆ. ಆರಾಧ್ಯ ಅವರು ಏಕಾಗ್ರತೆ ಮತ್ತು ಮೌನದ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ರವಿಚಂದ್ರಪ್ರಸಾದ್
, ಎಲ್. ಶಿವಲಿಂಗಮೂರ್ತಿ, ಗೀತಾ ಸುರೇಶ್ ಗೌಡ, ಮಂಜುನಾಥ್, ಮಹೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

 

 

Share This Article
error: Content is protected !!
";