ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ತುಮಕೂರು ವಲಯದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ವಿವಿಧ ವಯೋಮಿತಿಯ ಕ್ರಿಕೆಟ್ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ ಅವರಿಗೆ ಜಿಲ್ಲೆ, ವಲಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವೇದಿಕೆ ಕಲ್ಪಿಸಿಕೊಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಆಯ್ಕೆಯಾದ ಆಟಗಾರರಿಗೆ ಹಿರಿಯ ಆಟಗಾರರು ಹಾಗೂ ರಾಜ್ಯ ಅಕಾಡಮಿ ತರಬೇತುದಾರರಿಂದ ವಿಶೇಷ ತರಬೇತಿ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆಯ ವಿವರಗಳು:
ಸ್ಥಳ: ಚಿತ್ರದುರ್ಗ ಅಕಾಡಮಿ ಟರ್ಫ್ ಗೌಂಡ್, ಬೆಳಘಟ್ಟ. ಸಮಯ: ಬೆಳಿಗ್ಗೆ 9:00 ಗಂಟೆಗೆ.
ಅಗತ್ಯ ದಾಖಲೆಗಳು: ಆಸಕ್ತ ಆಟಗಾರರು ಕ್ರಿಕೆಟ್ ಸಮವಸ್ತ್ರ, ಕಿಟ್ ಸಲಕರಣೆಗಳು, ಆಧಾರ್ ಕಾರ್ಡ್ ಮತ್ತು ವಯಸ್ಸಿನ ದೃಢೀಕರಣ ಪತ್ರದೊಂದಿಗೆ ಹಾಜರಿರಬೇಕು.
ವೇಳಾಪಟ್ಟಿ:ವಯೋಮಿತಿ ದಿನಾಂಕ
14 ವರ್ಷದೊಳಗಿನವರ ತಂಡ 01-04-2026
16 ವರ್ಷದೊಳಗಿನವರ ತಂಡ 07-04-2026
19 ವರ್ಷದೊಳಗಿನವರ ತಂಡ 08-04-2026
ವಿಶೇಷ ಸೂಚನೆಗಳು:
ಮಹಿಳಾ ಮತ್ತು ಬಾಲಕಿಯರಿಗೂ ಸಹ ಚಿತ್ರದುರ್ಗ ಜಿಲ್ಲಾ ತಂಡಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದವರು ದಾವಣಗೆರೆ, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳ ವಿರುದ್ಧ ನಡೆಯುವ ಅಂತರ್ ಜಿಲ್ಲಾ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಅಂತರ್ ಜಿಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 30 ದಿನಗಳ ವಿಶೇಷ ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಲಾಗುವುದು.
ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕ್ರಿಕೆಟ್ ಕ್ಲಬ್ ಆಟಗಾರರು ಹಾಗೂ ಆಸಕ್ತರು ಈ ಸದವಕಾಶವನ್ನು ಬಳಸಿಕೊಂಡು ಉತ್ತಮ ಆಟಗಾರರಾಗಿ ರೂಪುಗೊಳ್ಳಬೇಕೆಂದು ಜಿಲ್ಲಾ ಸಂಚಾಲಕರಾದ ಎನ್. ಅಶೋಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9741738564, 6360411015.

