ಚಿತ್ರದುರ್ಗ ಲೀಡ್ ಬ್ಯಾಂಕ್: ವಾರ್ಷಿಕ ಸಾಲ ಗುರಿಯ ಬಿಡುಗಡೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಅವರು ಜಿಲ್ಲಾ ಲೀಡ್ ಬ್ಯಾಂಕ್‍ನ  ವಾರ್ಷಿಕ ಸಾಲ ಗುರಿ ಬಿಡುಗಡೆ ಮಾಡಿದರು.

ಆರ್ಥಿಕ ವರ್ಷ 2026-27ರ ಒಟ್ಟು ಸಾಲ ಗುರಿ 11786.78 ಕೋಟಿಗಳಾಗಿದ್ದು, ಆದ್ಯತಾ ವಲಯಗಳ ಸಾಲದ ಗುರಿ 8967.41 ಕೋಟಿಗಳು ಹಾಗೂ ಆದ್ಯತಾವಲಯವಲ್ಲದ ಸಾಲದ ಗುರಿ 2819.37 ಕೋಟಿಗಳಷ್ಟಿದೆ.

- Advertisement - 

ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ, ನಬಾರ್ಡ್‍ನ ಡಿಡಿಎಂ ವಿನಂತ್, ಎಸ್‍ಬಿಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅಭಿಲಾಶ್, ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಹಿರಿಯ ವ್ಯವಸ್ಥಾಪಕ ಚಕ್ರಪಾಣಿ ಹಾಗೂ ಅಧಿಕಾರಿ ಬಾಲಸಾಗರನ್ ಹಾಗೂ ಲೀಡ್ ಬ್ಯಾಂಕಿನ ಅಧಿಕಾರಿ ಶ್ರೀನಿವಾಸ ಇದ್ದರು.

 

- Advertisement - 

Share This Article
error: Content is protected !!
";