ಭಾರತ ಜನಗಣತಿ-2027ರ ‘ಸ್ವಯಂ ಗಣತಿ’ ಅಭಿಯಾನಕ್ಕೆ ಚಾಲನೆ

News Desk
- Advertisement -  - Advertisement - 

ಭಾರತ ಜನಗಣತಿ-2027ಸ್ವಯಂ ಗಣತಿಅಭಿಯಾನಕ್ಕೆ ಚಾಲನೆ
ಚಂದ್ರವಳ್ಳಿ ನ್ಯೂಸ್
, ಹಿರಿಯೂರು:
ನಗರದಲ್ಲಿ ಭಾರತ ಜನಗಣತಿ-2027ರ ಅಂಗವಾಗಿ ಸ್ವಯಂ ಗಣತಿ‘ (Self-Enumeration) ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.​ಹಿರಿಯೂರು ನಗರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುಜಾತ ಸುವರ್ಣ ಬಿ. ರವರು ಸ್ವಯಂ ಗಣತಿ ಕಾರ್ಯಕ್ಕೆ ಚಾಲನೆ ನೀಡಿದರು.

ನಗರದ ಸಿ.ಎಂ. ಬಡಾವಣೆಯಲ್ಲಿರುವ ಸಾಹಿತಿ ಎಂ.ಜಿ. ರಂಗಸ್ವಾಮಿ ಅವರ ಕುಟುಂಬದ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ಲಭಿಸಿತು.

- Advertisement - 

​ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಹಿರಿಯೂರು ತಾಲೂಕು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಅಮೃತೇಶ್ವರ ಸ್ವಾಮಿ ಬಿ., ಗರೀಬ್‌ ಆಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಾಗೇಂದ್ರ ನಾಯಕ್, ತಹಶೀಲ್ದಾರ್ ಎಂ. ಸಿದ್ದೇಶ್ ಹಾಗೂ ನಗರಸಭೆ ಪೌರಾಯುಕ್ತರಾದ ಎ. ವಾಸೀಂ ಉಪಸ್ಥಿತರಿದ್ದರು.

​ಸಾರ್ವಜನಿಕರಿಗೆ ಮನವಿ:
ನಗರಸಭೆ ಪೌರಾಯುಕ್ತರಾದ ಎ. ವಾಸೀಂ ಅವರು ಮಾತನಾಡಿ, “ಸಾರ್ವಜನಿಕರು ಭಾರತ ಜನಗಣತಿ-2027ರ ಸ್ವಯಂ ಗಣತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.

- Advertisement - 

ಸಾರ್ವಜನಿಕರು https://se.census.gov.in/ ತಂತ್ರಾಂಶದ ಮೂಲಕ ತಮ್ಮ ಕುಟುಂಬದ ಮಾಹಿತಿಯನ್ನು ತಾವೇ ಸ್ವತಃ ದಾಖಲಿಸಬಹುದು. ಹೀಗೆ ದಾಖಲಿಸಿದ ನಂತರ ಬರುವ ಗಣತಿ ಸಂಖ್ಯೆಯನ್ನು (Census Number), ನಿಮ್ಮ ಮನೆಗೆ ಬರುವ ಗಣತಿದಾರರಿಗೆ (Enumerator) ನೀಡಿ ಸಹಕರಿಸಬೇಕು,” ಎಂದು ಕೋರಿದ್ದಾರೆ.

​ಈ ಸಂದರ್ಭದಲ್ಲಿ ಸ್ವಯಂ ಗಣತಿ ಸಿಬ್ಬಂದಿಗಳು, ನಗರಸಭೆ ಹಾಗೂ ತಾಲೂಕು ಕಚೇರಿಯ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿಗಳು ಹಾಜರಿದ್ದರು.

 

 

Share This Article
error: Content is protected !!
";