ಹುಲಿಕೆರೆ ಗ್ರಾಮದಲ್ಲಿ ಏಪ್ರಿಲ್ 7ರಿಂದ ಶ್ರೀ ಕಾಶಿಭಗೀರಥಿ ಹಾಗೂ ಮಾರಮ್ಮನವರ ಜಾತ್ರಾ ಮಹೋತ್ಸವ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ​ಕಡೂರು:
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ
, ಹುಲಿಕೆರೆ ಗ್ರಾಮದ ಗ್ರಾಮದೇವತೆಗಳಾದ ಶ್ರೀ ಕಾಶಿಭಗೀರಥಿ ಮತ್ತು ಲೋಕಮಾತೆ ಮಾರಮ್ಮನವರ ಜಾತ್ರಾ ಮಹೋತ್ಸವವು ಇದೇ ಏಪ್ರಿಲ್ 7ರಿಂದ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

​ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರ ವಿವರ ಹೀಗಿದೆ:

- Advertisement - 

​ಕಾರ್ಯಕ್ರಮಗಳ ವಿವರ:
​ಏಪ್ರಿಲ್
7 (ಮಂಗಳವಾರ): ರಾತ್ರಿ 8.00 ಗಂಟೆಗೆ ಎಡೆ ಸೇವೆ ಹಾಗೂ ಬಾನ ಕಾರ್ಯಕ್ರಮ ನಡೆಯಲಿದೆ.

​ಏಪ್ರಿಲ್ 9 (ಗುರುವಾರ): * ಬೆಳಿಗ್ಗೆ 9.00 ಗಂಟೆಗೆ ನೂತನ ಚೌಡೇಶ್ವರಿ ದೇವಾಲಯದ ಲೋಕಾರ್ಪಣೆ. ​ಬೆಳಿಗ್ಗೆ 10.00 ಗಂಟೆಗೆ ರಥಕ್ಕೆ ಹೊಸ ಚಕ್ರಗಳ ಜೋಡಣೆ. ​ಸಂಜೆ 4.00 ಗಂಟೆಗೆ ಬಾಯಿಬೀಗ ಹಾಕುವ ಕಾರ್ಯಕ್ರಮ. ​ರಾತ್ರಿ 10.30ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಚೋಮನ ಕುಣಿತದೊಂದಿಗೆ ಗ್ರಾಮ ದೇವತೆಗಳ ಉತ್ಸವ ನಡೆಯಲಿದೆ.

- Advertisement - 

​ಏಪ್ರಿಲ್ 10 (ಶುಕ್ರವಾರ): ಮಧ್ಯಾಹ್ನ 1.00 ಗಂಟೆಗೆ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಅನ್ನಸಂತರ್ಪಣೆ. ​ಮಧ್ಯಾಹ್ನ 3.30ಕ್ಕೆ ಅದ್ಧೂರಿ ರಥೋತ್ಸವ ಜರುಗಲಿದೆ.

​ದಿವ್ಯ ಸಾನಿಧ್ಯ ಮತ್ತು ಅಧ್ಯಕ್ಷತೆ:
​ಈ ಎಲ್ಲಾ ಕಾರ್ಯಕ್ರಮಗಳು ಹುಲಿಕೆರೆ ದೊಡ್ಡಮರದ ಪೀಠಾಧ್ಯಕ್ಷರಾದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಹಾಗೂ ಕಿರಿಯ ಪೀಠಾಧಿಪತಿಗಳಾದ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆಯಲಿವೆ ಎಂದು ಕಲಾವಿದ ಹುಲಿಕೆರೆ ಪುಲಿಕೇಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";