ನಾಳೆಯಿಂದ ಹಿರೇಗುಂಟನೂರು ಶ್ರೀ ದ್ಯಾಮಲಾಂಬ ದೇವಿ ಜಾತ್ರಾ ಮಹೋತ್ಸವ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ನೆಲೆಸಿರುವ ಭಕ್ತರ ಇಷ್ಟಾರ್ಥ ಸಿದ್ಧಿಸುವ ತಾಯಿ ಶ್ರೀ ದ್ಯಾಮಲಾಂಬ ಅಮ್ಮನವರ ಜಾತ್ರಾ ಮಹೋತ್ಸವವು ಇದೇ ಏಪ್ರಿಲ್ 5ರಿಂದ ಅತ್ಯಂತ ವೈಭವದಿಂದ ಜರುಗಲಿದೆ.

ಏಪ್ರಿಲ್ 5ರ ಭಾನುವಾರದಿಂದ ಏಪ್ರಿಲ್ 11ರ ಶನಿವಾರದವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

- Advertisement - 

​ಕಾರ್ಯಕ್ರಮಗಳ ವಿವರ:
​ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿದಿನ ಸಂಜೆ ವಿಶೇಷ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ.
​ಏಪ್ರಿಲ್ 5 (ಭಾನುವಾರ): ಸಂಜೆ 6:30ಕ್ಕೆ ಕಲ್ಯಾಣೋತ್ಸವ.
​ಏಪ್ರಿಲ್ 6 (ಸೋಮವಾರ): ಸಂಜೆ 6:30ಕ್ಕೆ ನವಿಲು ಉತ್ಸವ.
​ಏಪ್ರಿಲ್ 7 (ಮಂಗಳವಾರ): ಸಂಜೆ 6:30ಕ್ಕೆ ಅಶ್ವೋತ್ಸವ.
​ಏಪ್ರಿಲ್ 8 (ಬುಧವಾರ): ಸಂಜೆ 6:30ಕ್ಕೆ ಮೀಸಲು ಪೂಜೆ.
​ಏಪ್ರಿಲ್ 9 (ಗುರುವಾರ): ಬೆಳಿಗ್ಗೆ 7:30ಕ್ಕೆ ಗಜೋತ್ಸವ.

​ಪ್ರಮುಖ ಆಕರ್ಷಣೆ: ರಥೋತ್ಸವ
​ಜಾತ್ರೆಯ ಪ್ರಮುಖ ಘಟ್ಟವಾದ ಭವ್ಯ ರಥೋತ್ಸವವು ಏಪ್ರಿಲ್ 9ರ ಗುರುವಾರ ಸಂಜೆ 5 ಗಂಟೆಗೆ ಜರುಗಲಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ತೇರು ಎಳೆಯುವ ಮೂಲಕ ಅಮ್ಮನವರ ಕೃಪೆಗೆ ಪಾತ್ರರಾಗಲಿದ್ದಾರೆ.

- Advertisement - 

​ಸಮಾಪ್ತಿ ಕಾರ್ಯಕ್ರಮಗಳು:
​ಏಪ್ರಿಲ್ 10 (ಶುಕ್ರವಾರ): ಸಂಜೆ 5 ಗಂಟೆಗೆ
ಸಿಡಿ ಪೂಜಾ ಕಾರ್ಯಕ್ರಮಹಾಗೂ ಸಂಜೆ 6 ಗಂಟೆಗೆ ದೇವಿಯ ಹೂವಿನ ಪಲ್ಲಕ್ಕಿ ಉತ್ಸವನಡೆಯಲಿದೆ. ​ಏಪ್ರಿಲ್ 11 (ಶನಿವಾರ): ಬೆಳಿಗ್ಗೆ 7 ಗಂಟೆಗೆ ಅವಭೃತೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

​ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್‌ ಅಧ್ಯಕ್ಷರಾದ ಈ. ಚಂದ್ರಣ್ಣ, ಕಾರ್ಯದರ್ಶಿ ಜಿ.ಹೆಚ್. ವಸಂತಕುಮಾರ್ ಹಾಗೂ ಚಿತ್ರದುರ್ಗ ತಹಶೀಲ್ದಾರ್ ಗೋವಿಂದರಾಜು ಅವರು ಸಮಸ್ತ ಸದ್ಭಕ್ತ ಮಂಡಳಿಗೆ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆದರದ ಸುಸ್ವಾಗತ ಕೋರಿದ್ದಾರೆ.

 

 

Share This Article
error: Content is protected !!
";