ರೈತನ ಪರಿಶ್ರಮದಿಂದ ಭಾರತ ಸ್ವಾವಲಂಬಿಯಾಗಿದೆ-ಸಾಯಿ ರೆಡ್ಡಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ದಬಳ್ಳಾಪುರ:
ದೇಶದಲ್ಲಿ ರೈತ ಉಳಿದರೆ ದೇಶ ಉಳಿದಿತ್ತು ಪ್ರತಿ ಗ್ರಾಮದಲ್ಲಿ ರೈತರು ಪ್ರಬಲ ರಾಗಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೆ ಸಾಯಿರಡ್ಡಿ ಹೇಳಿದರು.

ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ದಕ್ಷಿಣಾ ಪ್ರಾಂತ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಯಲಿಯೂರು ಗ್ರಾಮ ಭಾರತೀಯ ಕಿಸಾನ್ ಸಂಘ ಜಿಲ್ಲಾ ಪ್ರಮುಖ್  ಆಂಜಿನಪ್ಪ ನವರ   ಮನೆಯಲ್ಲಿ  ಯೋಜನೆ ಮಾಡಲಾದ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿ

- Advertisement - 

ಭಾರತದಲ್ಲಿ ರೈತರೆ ದೇಶದ ಬೆನ್ನೆಲುಬು, ಮತ್ತು ಅವರ ಪರಿಶ್ರಮದಿಂದಲೇ ಭಾರತ ಸ್ವಾವಲಂಬಿಯಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ  ಯೋಜನೆಯಡಿ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ವಾರ್ಷಿಕ 6,000 ಆರ್ಥಿಕ ನೆರವು  ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. 2026ರ ಬಜೆಟ್‌ನಲ್ಲಿ ಈ ಮೊತ್ತವನ್ನು 12,000ಕ್ಕೆ ಹೆಚ್ಚಿಸುವ ಚರ್ಚೆಗಳು ನಡೆಯುತ್ತಿದ್ದು, ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳ ಬೇಕಾಗಿದೆ ಹಾಗು ಸಾವಯುವ ಕೃಷಿಯ ಬಗ್ಗೆ ಸರ್ಕಾರಗಳು ಉತ್ತೇಜಿಸಲು ಪ್ರಸ್ತಾವನೆ ನೀಡಲಾಗಿದ್ದು

ಸಾವಯವ ಗೊಬ್ಬರವು ನೈಸರ್ಗಿಕ ತ್ಯಾಜ್ಯದಿಂದ (ಕಾಂಪೋಸ್ಟ್, ಹಸುವಿನ ಸಗಣಿ) ತಯಾರಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿದರೆ, ರಸಗೊಬ್ಬರವು ಕಾರ್ಖಾನೆಗಳಲ್ಲಿ ತಯಾರಾಗುವ ರಾಸಾಯನಿಕವಾಗಿದ್ದು ಸಸ್ಯಗಳಿಗೆ ತ್ವರಿತ ಪೋಷಕಾಂಶಗಳನ್ನು ಒದಗಿಸುತ್ತದೆ. ಸಾವಯವವು ದೀರ್ಘಕಾಲದ ಮಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ರಸಗೊಬ್ಬರವು ತಕ್ಷಣದ ಇಳುವರಿಗೆ ಸಹಕಾರಿಯಾಗುತ್ತೆ.

- Advertisement - 

  ಪ್ರಸ್ತುತ ಇನ್ನೂ ಎರಡು ವರ್ಷದಲ್ಲಿ ಭಾರತೀಯ ಸಂಘಕ್ಕೆ ಐವತ್ತು ವರ್ಷ ತುಂಬಲಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ಗ್ರಾಮ ಹಾಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಿತಿ ಪ್ರಾರಂಭಿಸಿ ತನ್ನದೆ ಅದ ಕಾರ್ಯ ರೂಪ ಮಾಡುವ ಮೂಲಕ ರೈತರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು  ಎಂದರು.

 ಪ್ರಾಂತ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ ಸಂಘದ ಸುವರ್ಣ ಸಂದರ್ಭಕ್ಕೆ ರಾಜ್ಯದಲ್ಲಿ ಐದು ಲಕ್ಷ ಸದಸ್ಯತ್ವ ಪಡೆಯಲಿದ್ದು ರಾಜ್ಯ ಪ್ರತಿ ಜಿಲ್ಲೆ ತಾಲ್ಲೂಕು ಗ್ರಾಮ ದಲ್ಲಿಯಲ್ಲಿ ಸಮಿತಿಯನ್ನು ರಚಸಬೇಕಾಗಿದೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎನ್ ನಾಗರಾಜಯ್ಯು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅಂಭಿಕಾ  ಕೋಶಾಧ್ಯಕ್ಷ ಚನ್ನಿಗರಾಯಪ್ಪ  ದೊಡ್ಡಬಳ್ಳಾಪುರ ನೆಲಮಂಗಲ ದೇವನಹಳ್ಳಿ ಹೋಸಕೋಟೆ ತಾಲ್ಲೂಕಿನ ಅಧ್ಯಕ್ಷರು  ಕಾರ್ಯದರ್ಶಿ ಹಾಗು ಜಿಲ್ಲಾ ಮತ್ತು ತಾಲ್ಲೂಕಿನ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

ರೈತ ದೇಶದ ಬೆನ್ನೆಲುಬು, ಅನ್ನದಾತ ಮತ್ತು ಆರ್ಥಿಕತೆಯ ಅಡಿಪಾಯ. ಕೃಷಿ ಉತ್ಪನ್ನಗಳ ಬೆಲೆ, ವಿದ್ಯುತ್, ನೀರಾವರಿ ಸಮಸ್ಯೆಗಳು ಪ್ರಮುಖ ಸವಾಲುಗಳಾಗಿದ್ದು, ರೈತರ ಸಬಲೀಕರಣವು ದೇಶದ ಪ್ರಗತಿಗೆ ಅತ್ಯಗತ್ಯವಾಗಿದೆ. ಹೈನುಗಾರಿಕೆ ಯಲ್ಲಿ ಒಂದು ಲೀಟರ್ ಹಾಲಿಗೆ 53 ರೂಗಳು ಖರ್ಚಾಗುತ್ತಿದೆ ಅದರೆ ಸರ್ಕಾರಗಳು  33 ರೂ ಗಳು ಕೊಟ್ಟರೆ  ರೈತ ಉಳಿಯಲು ಸಾದ್ಯ ವಿಲ್ಲ ಅದರ ರಿಂದ ಒಗ್ಗಟಾಗಬೇಕಾಗಿದೆ.
ನಾರಾಯಣ ಸ್ವಾಮಿ, ಸಂಘಟನಾ ಕಾರ್ಯದರ್ಶಿ, ಭಾರತೀಯ ಕಿಸಾನ್ ಸಂಘ, ಕರ್ನಾಟಕ ದಕ್ಷಿಣಾ ಪ್ರಾಂತ್ಯ.

 

 

Share This Article
error: Content is protected !!
";