ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ರಾಜಕಾರಣ ಮಾಡುತ್ತಿರುವ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಅನ್ಯಾಯವೆಸಗುತ್ತಿದ್ದಾರೆಂದು ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಮೋಹನ್ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ. ಕಚೇರಿಯಲ್ಲಿ ಭಾನುವಾರ ಡಾ.ಬಾಬು ಜಗಜೀವನರಾಂರವರ ೧೧೯ ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂರವರನ್ನು ಅಗೌರವದಿಂದ ನಡೆಸಿಕೊಂಡ ಕಾಂಗ್ರೆಸ್ಗೆ ಜಯಂತಿಯನ್ನು ಆಚರಿಸುವ ನೈತಿಕತೆಯಿಲ್ಲ. ಕಾಂಗ್ರೆಸ್ ನಾಯಕರುಗಳ ವರ್ತನೆಯಿಂದ ಬೇಸತ್ತು ೧೯೭೭ ಫೆ.೨ ರಂದು ಪಕ್ಷದಿಂದ ಹೊರ ಬಂದ ಡಾ.ಬಾಬುಜಗಜೀವನರಾಂರವರು ಬಾಲ್ಯದಲ್ಲಿಯೇ ಶೋಷಣೆ, ಅಸ್ಪೃಶ್ಯತೆಯ ನೋವುಂಡವರು. ರೈತರ ಕಷ್ಟಗಳನ್ನು ಕಣ್ಣಾರೆ ಕಂಡು ಕೃಷಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಹಸಿರು ಕ್ರಾಂತಿಯ ಹರಿಕಾರ ಎಂಬ ಬಿರುದು ಪಡೆದರೆಂದು ಅವರ ಸಾಧನೆಗಳನ್ನು ಸ್ಮರಿಸಿದರು.
ಬಿಹಾರದಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿದ ಡಾ.ಬಾಬು ಜಗಜೀವನರಾಂರವರು ೩೨ ನೇ ವಯಸ್ಸಿಗೆ ದೊಡ್ಡ ನಾಯಕನಾಗಿ ಬೆಳೆದರು. ೧೯೩೬ ರಲ್ಲಿ ರಾಜಕೀಯ ಪ್ರವೇಶಿಸಿದ ಅವರು ೧೯೭೧ ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಯುದ್ದಕ್ಕೆ ಬಂದಾಗ ಸಮರ್ಥವಾಗಿ ನಿಭಾಯಿಸಿ ದೇಶಕ್ಕೆ ಜಯ ತಂದು ಕೊಟ್ಟ ಕೀರ್ತಿ ಅವರಿಗೆ ಸಲ್ಲಬೇಕು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ನಾಟಕೀಯವಾಗಿ ಜಯಂತಿಯನ್ನು ಆಚರಿಸುತ್ತಿರುವುದು ಯಾವ ಪುರುಷಾರ್ಥಕ್ಕೆ? ಮೊದಲು ಒಳ ಮೀಸಲಾತಿಯಲ್ಲಿನ ಗೊಂದಲಗಳನ್ನು ಸರಿಪಡಿಲಿ ಎಂದು ಜಿ.ಹೆಚ್.ಮೋಹನ್ಕುಮಾರ್ ಒತ್ತಾಯಿಸಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪರಶುರಾಂ, ಪ್ರಭಾರಿ ಎ.ಮುರಳಿ, ಮಾಧುರಿ ಗಿರೀಶ್, ಎಸ್ಸಿ. ಮೋರ್ಚಾ ನಿಕಟಪೂರ್ವ ಅಧ್ಯಕ್ಷ ತಿಪ್ಪೇಸ್ವಾಮಿ, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಧನಂಜಯ, ಸುರೇಶ್, ನಾಗರಾಜ್, ನವೀನ್, ಪ್ರದೀಪ್, ಕಲ್ಲೇಶ್, ಬಸಣ್ಣ, ಹನುಮಂತ, ಪ್ರಸನ್ನ, ವಿರುಪಾಕ್ಷ, ಕೆಂಚಪ್ಪ, ದುರುಗೇಶ್, ಕೆ.ಶಿವಣ್ಣಾಚಾರ್, ರಾಜಣ್ಣ, ಆರ್.ಶೋಭರಾಜ್ ಇವರುಗಳು ಜಯಂತಿಯಲ್ಲಿ ಪಾಲ್ಗೊಂಡಿದ್ದರು.

