ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೀದರ್ ನಲ್ಲಿ ಏಪ್ರಿಲ್ 11 & 12ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಸಂಘಟಿಸಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರತಿ ವರ್ಷದಂತೆಯೇ ಈ ಬಾರಿಯೂ ರಾಜ್ಯ ವ್ಯಂಗ್ಯಚಿತ್ರಕಾರರ ಸಂಘದ ಸಹಯೋಗದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು.

ಪತ್ರಿಕೆ, ಮ್ಯಾಗಜಿನ್ ಗಳಲ್ಲಿ ವ್ಯಂಗ್ಯಚಿತ್ರಗಳಿದ್ದರೆ ಸೊಬಗು. ನೂರಾರು ಪದಗಳಲ್ಲಿ ಹೇಳುವುದನ್ನು ಒಂದು ವ್ಯಂಗ್ಯಚಿತ್ರ ಧ್ವನಿಸಬಲ್ಲದು. ಪ್ರಸ್ತುತ ರಾಜಕೀಯ ಸನ್ನಿವೇಶ, ಸಾಮಾಜಿಕ ಸೇರಿದಂತೆ ಯುದ್ಧದ ಸನ್ನೀವೇಶದ ತನಕ ಕನ್ನಡಿ ಹಿಡಿಯಬಲ್ಲದು. ಅಷ್ಟು ಪರಿಣಾಮಕಾರಿ  ಮಾಧ್ಯಮ ವ್ಯಂಗ್ಯಚಿತ್ರ. ಅದಕ್ಕಾಗಿಯೇ ಸುದ್ದಿಮನೆಯಲ್ಲಿ ವ್ಯಂಗ್ಯಚಿತ್ರಕಾರರಿಗೆ ವಿಶೇಷ ಸ್ಥಾನಮಾನವಿದೆ.

- Advertisement - 

ಈ ಹಿನ್ನೆಲೆಯಲ್ಲಿ ಪ್ರತಿ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರಕಾರರಿಗೆ, ಕೆಯುಡಬ್ಲ್ಯೂಜೆ ವೇದಿಕೆ ಕಲ್ಪಿಸಿಕೊಂಡು ಬಂದಿದೆ. ವ್ಯಂಗ್ಯಚಿತ್ರ ಪ್ರದರ್ಶನವನ್ನು ರಾಜ್ಯ ವ್ಯಂಗ್ಯಚಿತ್ರಕಾರರ ಸಂಘವು ನಿಭಾಯಿಸುತ್ತಿದೆ. ಸುದ್ದಿಮನೆಯ ವ್ಯಂಗ್ಯಚಿತ್ರಕಾರರು ಈ ಪ್ರದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಎಂ.ವಿ.ಶಿವರಾಂ (84533 33722) ಅವರನ್ನು ಸಂಪರ್ಕಿಸಬಹುದು.

 

- Advertisement - 

Share This Article
error: Content is protected !!
";