ದಾವಣಗೆರೆಯಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ: ಹಿರಿಯ ಕಾರ್ಯಕರ್ತರಿಗೆ ಸನ್ಮಾನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
“ರಾಷ್ಟ್ರಸೇವೆಯ ದೀಕ್ಷೆ
, ಅಂತ್ಯೋದಯದ ದೃಢ ಸಂಕಲ್ಪ ಮತ್ತು ಕೋಟ್ಯಂತರ ಕಾರ್ಯಕರ್ತರ ನಿಸ್ವಾರ್ಥ ಸೇವೆಯೇ ಭಾರತೀಯ ಜನತಾ ಪಾರ್ಟಿಯ ಅಡಿಪಾಯ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬಣ್ಣಿಸಿದರು.

​ನಗರದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ವಿಜಯದ ಸಂಕಲ್ಪದೊಂದಿಗೆ ಸಿದ್ಧಾಂತ ಹಾಗೂ ಜನಸೇವೆಯ ಪಥದಲ್ಲಿ ಮುನ್ನಡೆಯೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

- Advertisement - 

​ಹಿರಿಯ ಚೇತನಗಳಿಗೆ ಗೌರವ ಸಮರ್ಪಣೆ-
​ಪಕ್ಷದ ಬೆಳವಣಿಗೆಗೆ ಶ್ರಮಿಸಿದ ಹಿರಿಯರನ್ನು ಸ್ಮರಿಸಿದ ವಿಜಯೇಂದ್ರ ಅವರು
, ಜನಸಂಘದ ಕಾಲದಿಂದಲೂ ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರಾದ ಸೋಮನಾಥಯ್ಯ, ವೈ. ಮಲ್ಲೇಶ್, ಶಂಕರನಾರಾಯಣ, ಭೂದಾಳ್ ವೀರಭದ್ರಪ್ಪ ಅವರನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು. ಇಂತಹ ಹಿರಿಯ ಕಾರ್ಯಕರ್ತರ ಪರಿಶ್ರಮವೇ ಇಂದು ಬಿಜೆಪಿ ಹೊಂದಿರುವ ಶಕ್ತಿಗೆ ಮೂಲ ಕಾರಣ ಎಂದು ಅವರು ಶ್ಲಾಘಿಸಿದರು.

​​ಕಾರ್ಯಕ್ರಮದಲ್ಲಿ ಪ್ರಮುಖ ನಾಯಕರುಗಳಾದ ​ಜಿ.ಎಂ. ಸಿದ್ದೇಶ್ವರ್ (ಮಾಜಿ ಕೇಂದ್ರ ಸಚಿವರು), ​ಛಲವಾದಿ ನಾರಾಯಣಸ್ವಾಮಿ (ವಿಧಾನ ಪರಿಷತ್ ವಿಪಕ್ಷ ನಾಯಕರು), ​ಎಸ್.ಎ. ರವೀಂದ್ರನಾಥ್ (ಹಿರಿಯರು, ಮಾಜಿ ಶಾಸಕರು), ​ಎಂ.ಪಿ. ರೇಣುಕಾಚಾರ್ಯ (ಮಾಜಿ ಸಚಿವರು), ​ರಾಜಶೇಖರ್ ನಾಗಪ್ಪ (ಜಿಲ್ಲಾಧ್ಯಕ್ಷರು), ​ಶಾಸಕರುಗಳಾದ ಬಿ.ಪಿ. ಹರೀಶ್, ಶ್ರೀವತ್ಸ, ನವೀನ್, ಮಾಜಿ ಶಾಸಕರಾದ ಬಸವರಾಜ ನಾಯ್ಕ್, ಶಿವಯೋಗಿಸ್ವಾಮಿ ಹಾಗೂ ಪ್ರಮುಖರಾದ ಎಸ್.ವಿ. ರಾಮಚಂದ್ರ, ಮಾಡಾಳ್ ಮಲ್ಲಿಕಾರ್ಜುನ ಸೇರಿದಂತೆ ಅನೇಕ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

- Advertisement - 

​”ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಮತ್ತು ಆಶೀರ್ವದಿಸುತ್ತಾ ಬಂದಿರುವ ಸಮಸ್ತ ನಾಗರಿಕರಿಗೂ ಬಿಜೆಪಿ ಸ್ಥಾಪನಾ ದಿನದ ಹಾರ್ದಿಕ ಶುಭಕಾಮನೆಗಳು.” ಬಿ.ವೈ. ವಿಜಯೇಂದ್ರ.

 

 

Share This Article
error: Content is protected !!
";