“ನಿನ್ನೆ ವಿರೋಧಿಸಿದವರ ಜೊತೆ ಇಂದು ‘ಚಡ್ಡಿ ದೋಸ್ತ್’, ಜನರ ನಂಬಿಕೆಗೆ ಇದು ದ್ರೋಹವಲ್ಲವೇ?”

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿನ್ನೆ ವಿರೋಧಿಸಿದವರ ಜೊತೆ ಇಂದು ಚಡ್ಡಿ ದೋಸ್ತ್’ — ಜನರ ನಂಬಿಕೆಗೆ ಇದು ದ್ರೋಹವಲ್ಲವೇ?”. ತತ್ವಗಳಿಲ್ಲದ ರಾಜಕೀಯ: ಹೊಂದಾಣಿಕೆಗಳ ಹರಾಜು ಮಾರುಕಟ್ಟೆ!.

ನಿನ್ನೆ ಶತ್ರುಇಂದು ಸ್ನೇಹಿತ: ರಾಜಕೀಯದ ಮುಖವಾಡಗಳ ಆಟ
ಚಡ್ಡಿ ದೋಸ್ತ್ ರಾಜಕೀಯ: ನಂಬಿಕೆ ಮಾರಾಟವಾಗುತ್ತಿರುವ ಸಮಯ! ಜೋಡೆತ್ತುಗಳಿಂದ ಜೋಡಿ ಬದಲಾವಣೆವರೆಗೆ: ತತ್ವವಿಲ್ಲದ ನಾಯಕತ್ವದ ಕಥೆ.
ರಾಜಕೀಯವೇ ನಾಟಕ: ಪಾತ್ರಗಳು ಬದಲಾಗುತ್ತಿವೆ, ಜನರ ವಿಶ್ವಾಸ ಕುಸಿಯುತ್ತಿದೆ.

- Advertisement - 

ಮಾತು ಬೇರೆ, ನಡೆ ಬೇರೆ: ಇಂದಿನ ರಾಜಕೀಯದ ನಗ್ನ ಸತ್ಯ. ಅಧಿಕಾರಕ್ಕಾಗಿ ಎಲ್ಲವೂ ಸರಿ: ನೀತಿಗೆಟ್ಟ ರಾಜಕೀಯದ ನಿಜ ಮುಖ. ತತ್ವಗಳ ಮರಣ, ಹೊಂದಾಣಿಕೆಯ ಹುಟ್ಟು: ಇಂದಿನ ರಾಜಕೀಯದ ದುರಂತ. ವಿರೋಧದಿಂದ ವಂದನೆವರೆಗೆ: ಕ್ಷಣಾರ್ಧದಲ್ಲಿ ಬದಲಾಗುವ ರಾಜಕೀಯ.

ಜನರ ವಿಶ್ವಾಸದ ಮೇಲೆ ರಾಜಕೀಯ ಆಟ: ಯಾರು ಹೊಣೆ?”.
ರಾಜಕೀಯ ಅಂದರೆ ಜನಸೇವೆ ಅಂತ ಕಲಿತ ಕಾಲ ಹೋಯಿತು. ಇಂದು ಅದು ಹೊಂದಾಣಿಕೆಗಳ ಹರಾಜು ಮಾರುಕಟ್ಟೆಯಾಗಿ ಬದಲಾಗುತ್ತಿದೆ. ಯಾವಾಗ ಯಾರ ಜೊತೆ ಕೈ ಜೋಡಿಸಬೇಕು
, ಯಾವಾಗ ಯಾರ ವಿರುದ್ಧ ಧ್ವನಿ ಎತ್ತಬೇಕು, ಯಾವಾಗ ಯಾರನ್ನ ಹೊಗಳಬೇಕು, ಯಾವಾಗ ಯಾರನ್ನ ದೋಷಿಸಬೇಕು ಈ ಎಲ್ಲವೂ ತತ್ವ, ಸಿದ್ಧಾಂತಗಳ ಆಧಾರದಲ್ಲಿ ಅಲ್ಲ, ಅಧಿಕಾರದ ಲೆಕ್ಕಾಚಾರದಲ್ಲಿ ನಡೆಯುತ್ತಿದೆ.

- Advertisement - 

ಒಂದು ಕ್ಷಣದಲ್ಲಿ ಶತ್ರು, ಮತ್ತೊಂದು ಕ್ಷಣದಲ್ಲಿ ಸ್ನೇಹಿತ ಈ ರಾಜಕೀಯದ ಗೋಸಂಬಿತನವನ್ನು ನೋಡಿದಾಗ, ಇದು ನಾಯಕತ್ವವೋ ಅಥವಾ ಮುಖವಾಡದ ನಟನೆವೋ ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ವಿಶೇಷ ಲೇಖನ:
ಇಂದಿನ ರಾಜಕಾರಣಿಗಳ ಗೋಸಂಬಿತನ ನಿಜವಾಗಿಯೂ ಅಚ್ಚರಿಯ ಸಂಗತಿ. ಯಾವಾಗ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಯಾವಾಗ ಯಾರ ವಿರುದ್ಧ ಧ್ವನಿ ಎತ್ತುತ್ತಾರೆ, ಯಾವಾಗ ಯಾರನ್ನ ದೋಷಿಸುತ್ತಾರೆ, ಯಾವಾಗ ಯಾರನ್ನ ಹೊಗಳುತ್ತಾರೆ ಈ ಎಲ್ಲವೂ ಕ್ಷಣಾರ್ಧದಲ್ಲಿ ಬದಲಾಗುವ ರಾಜಕೀಯ ಕಲೆ ಆಗಿದೆ.

ನಿಜ ಹೇಳಬೇಕು ಅಂದ್ರೆ, ಈ ಕಲೆ ಅಷ್ಟು ಅದ್ಭುತ ಈ ಭೂಮಿಯ ಯಾವುದೇ ವಿಶ್ವವಿದ್ಯಾಲಯದಲ್ಲೂ ಇದನ್ನ ಕಲಿಸಲು ಸಾಧ್ಯವಿಲ್ಲ. ಆದರೆ ಈ ಅದ್ಭುತ ಕಲೆ ಹಿಂದೆ ಒಂದು ಕಠಿಣ ಪ್ರಶ್ನೆ ನಿಂತಿದೆ ಇವರಿಗೆ ಕಿಂಚಿತು ಮಾನ-ಮರ್ಯಾದೆ ಅನ್ನೋದು ಇದೆಯೇ?

ಜೀವಂತ ಉದಾಹರಣೆ ಒಂದು ನೋಡಿದರೆ — “ನಮ್ಮ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ ಅಂದ್ರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆಎಂದು ಘೋಷಣೆ ಮಾಡಿದ ರಾಜಕಾರಣಿ, ನಂತರ ಅದೇ ಸಮುದಾಯಕ್ಕೆ ಟಿಕೆಟ್ ಕೊಡದವರ ಜೊತೆಗೇ ಕೈಹಿಡಿದು ನಾವು ಜೀವನಪರ್ಯಂತ ಚಡ್ಡಿ ದೋಸ್ತ್ಅಂತ ನಿಂತರು. ಆಗ ಅವರ ಆತ್ಮಗೌರವ ಎಲ್ಲಿಗೆ ಹೋಯಿತು? ಆ ಘೋಷಣೆಯ ಬೆಲೆ ಏನು ಆಯಿತು?

ಇನ್ನೊಂದು ಉದಾಹರಣೆ ಒಂದು ಕಾಲದಲ್ಲಿ ವಿಧಾನಸಭೆಯಲ್ಲಿ ಕೈಕೈ ಹಿಡಿದು ಮೇಲಕ್ಕೆತ್ತಿ ನಾವು ಜೋಡೆತ್ತುಗಳುಎಂದು ಅಬ್ಬರಿಸಿದ ನಾಯಕರು, ತಮ್ಮ ಜೋಡಿಯ ತಾಕತ್ತನ್ನು ಹೆಮ್ಮೆಪಟ್ಟು ತೋರಿಸಿದ ಕ್ಷಣಗಳನ್ನು ಜನ ನೋಡಿದ್ದಾರೆ. ಆದರೆ ಇಂದು ಅದೇ ಜೋಡಿ ಎಲ್ಲಿದೆ? ಆ ಒಗ್ಗಟ್ಟು ಯಾವ ದಿಕ್ಕಿಗೆ ಹೋಯಿತು?

ಒಟ್ಟಾರೆ ನೋಡಿದರೆ, ಈ ರಾಜಕೀಯದಲ್ಲಿ ಕಿಂಚಿತು ಮಾನ-ಮರ್ಯಾದೆ ಅನ್ನೋದೇ ಕಾಣಿಸುತ್ತಿಲ್ಲ. ಯಾವಾಗ ಬೇಕಾದರೂ ಯಾರನ್ನ ಹೊಗಳುವುದು, ಯಾವಾಗ ಬೇಕಾದರೂ ಯಾರನ್ನ ತೆಗಳುವುದು ಇದೇ ಇಂದಿನ ರಾಜಕೀಯದ ನಿಜಸ್ವರೂಪವಾಗಿದೆ. ಇದು ಕೇವಲ ವ್ಯವಹಾರವಲ್ಲ, ನಾಚಿಕೆಟ್ಟ ರಾಜಕೀಯದ ದುಸ್ತರ ಕೋಟೆಯಾಗಿದೆ.

ಇನ್ನೊಂದು ಗಂಭೀರ ವಿಚಾರ ಇಂದಿನ ರಾಜಕಾರಣಿಗಳಿಗೆ ತತ್ವಬದ್ಧತೆ ಮತ್ತು ಸಿದ್ಧಾಂತ ಅನ್ನೋದು ಲವಲೇಶವೂ ಕಾಣುತ್ತಿಲ್ಲ. ಅಧಿಕಾರಕ್ಕಾಗಿ ಎಲ್ಲವನ್ನೂ ಗಾಳಿಗೆ ತೂರಿ, ಯಾವಾಗ ಬೇಕಾದರೂ ಪಕ್ಷ ಬಿಟ್ಟು, ಯಾವಾಗ ಬೇಕಾದರೂ ಮತ್ತೊಂದು ಪಕ್ಷಕ್ಕೆ ಸೇರುವುದು ಸಾಮಾನ್ಯವಾಗಿಬಿಟ್ಟಿದೆ. ಇದು ಯಾವ ರಾಜಕೀಯ? ಇದು ನೀತಿಗೆಟ್ಟ, ಮೌಲ್ಯವಿಲ್ಲದ ಅಧಿಕಾರದ ಆಟ.

ಇದು ರಾಜಕೀಯವೋ ಅಥವಾ ಜನರ ಮುಂದೆ ನಡೆಯುವ ಮೋಸದ ನಾಟಕವೋ? ಇದು ಹೊಂದಾಣಿಕೆಯ ಕೌಶಲ್ಯವೋ ಅಥವಾ ನೈತಿಕತೆ ಕಳೆದುಕೊಂಡ ನಿರ್ಲಜ್ಜತೆಯೋ? ಇದು ನಾಯಕತ್ವವೋ ಅಥವಾ ಕುರ್ಚಿಗಾಗಿ ನಡೆಯುವ ಪಾತ್ರಧಾರಿಗಳ ಆಟವೋ?

ನಗ್ನ ಸತ್ಯ ಏನೆಂದರೆ ತತ್ವ ಮತ್ತು ಸಿದ್ಧಾಂತಗಳನ್ನು ತ್ಯಜಿಸಿದ ರಾಜಕೀಯದಲ್ಲಿ ಗೆಲ್ಲೋದು ಕೆಲ ನಾಯಕರು ಇರಬಹುದು. ಆದರೆ ಸೋಲೋದು ಜನರ ವಿಶ್ವಾಸ ಮತ್ತು ಪ್ರಜಾಪ್ರಭುತ್ವದ ಗೌರವ…….
ಲೇಖನ
: ಶ್ರೀನಿವಾಸ್ ಕೆ ಟಿ, ಬೆಂಗಳೂರು.

 

Share This Article
error: Content is protected !!
";