ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ರಮೇಶ್ ಅವಿರೋಧ ಆಯ್ಕೆ

News Desk
- Advertisement -  - Advertisement - 
ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ರಮೇಶ್ ಅವಿರೋಧ ಆಯ್ಕೆ
ಚಂದ್ರವಳ್ಳಿ ನ್ಯೂಸ್, ದೊಡ್ದಬಳ್ಳಾಪುರ;                      ಛಲವಾದಿ ಮಹಾಸಭಾ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ರಮೇಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಜಿಲ್ಲಾಧ್ಯಕ್ಷ ನರೇಶ್‌ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಎಲ್ಲರ ಒಮ್ಮತದಿಂದ ಎಸ್. ಯು. ರಮೇಶ್ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಎಸ್ ಯು ರಮೇಶ್ ಅವರಿಗೆ ಅಧಿಕಾರ ಹಸ್ತಾಂತರಿಸುವ  ಮೂಲಕ ಗಣ್ಯರು ಅಭಿನಂದಿಸಿದರು.
ಈ ವೇಳೆ ಮಲ್ಲರಾಜು, ಮರಿಯಪ್ಪ, ಮುನಿರಾಜು ಗೌಡ, ಕೊನಘಟ್ಟ ರಾಮನಂಜಿನಪ್ಪ, ಗೂಳ್ಯ ಹನುಮಣ್ಣ ರಾಜಗೋಪಾಲ್, ರಾಜು ಸಣ್ಣಕ್ಕಿ, ಮದ್ದೂರಪ್ಪ, ಅನಿಲ್‌, ರವಿ, ಆನಂದ, ಮಧುಸೂದನ್, ಎ ಮಂಜುನಾಥ್, ಛಲವಾದಿ ಸುರೇಶ್ ಮಂಜುನಾಥ್ ಸೇರಿದಂತೆ ಇತರರು ಇದ್ದರು.

Share This Article
error: Content is protected !!
";