ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

News Desk
- Advertisement -  - Advertisement - 
ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ: ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್‌ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ ಕಂಗಾಲಾಗಿರುವ ಆಟೋ ಚಾಲಕರಿಗೆ ನಗರದ ಏಕೈಕ ಎಲ್ಪಿಜಿ ಕೇಂದ್ರದಲ್ಲಿ ಎಲ್ಪಿಜಿ ಸಿಗುವ ಮಾಹಿತಿ ಮೇರೆಗೆ ಆಟೋ ಚಾಲಕರು ಕಿಲೊ ಮೀಟ‌ರ್ ಗಟ್ಟಲೆ ಸಾಲಿನಲ್ಲಿ ಆಟೋಗಳನ್ನ ನಿಲ್ಲಿಸಿ ಕಾಯುತ್ತಿದ್ದಾರೆ.
ಪಕ್ಕದ ಚಿಕ್ಕಬಳ್ಳಾಪುರ, ವಿಜಯಪುರ, ನೆಲಮಂಗಲ ಗೌರಿಬಿದನೂರು, ಯಲಹಂಕ, ದೇವನಹಳ್ಳಿ, ಕೆಆರ್ ಪುರಂ ಸೇರಿದಂತೆ ಹಲವು ದೂರದ ಊರುಗಳಿಂದಲೂ ಆಟೋ ಚಾಲಕರು ಆಗಮಿಸಿ ಮಧ್ಯಾಹ್ನದಿಂದಲೇ ಕಾಯುತ್ತಿದ್ದಾರೆ.
ಎಲ್ಪಿಜಿ ಇಲ್ಲದೆ ಜೀವನ ನಿರ್ಹವಣೆ ಅಸಾಧ್ಯವಾಗಿದೆ. ನಮ್ಮ ಜೀವನ ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಬದುಕುವುದು. ಈಗ ಎಲ್ಪಿಜಿ ಇಲ್ಲದೆ ಆಟೋ ನಿಲ್ಲಿಸಿ 10 ದಿನಗಳಾಗಿವೆ. ಮನೆ ಬಳಿ ಸಾಲ ಕೊಟ್ಟವರು ಬರುತ್ತಿದ್ದಾರೆ. ಸಾಲ ಕಟ್ಟಲಾಗದೆ ಪರಿತಪಿಸುವಂತಾಗಿದೆ. ಒಮ್ಮೆ ಸಾಲ ಕೊಟ್ಟವರು ಮತ್ತೊಮ್ಮೆ ಸಾಲ ನೀಡುತ್ತಿಲ್ಲ. ಸರ್ಕಾರ ಅಧಿಕೃತ ಆಟೊ ಚಾಲಕರನ್ನ ಗುರುತಿಸಿ ಸಹಾಧನ ನೀಡಬೇಕು ಎಂದು ಆಟೋ ಚಾಲಕ ಮಂಜುನಾಥ್ ಮನವಿ ಮಾಡಿದರು.
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.

Share This Article
error: Content is protected !!
";