ಮಾದಕ ವಸ್ತು ಮುಕ್ತ ನಗರಕ್ಕೆ ಪೊಲೀಸರು ಬದ್ಧ; 30 ಡ್ರಗ್ ಪೆಡ್ಲರ್‌ಗಳ ಗಡಿಪಾರು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಮೈಸೂರು:
ಸಾಂಸ್ಕೃತಿಕ ನಗರಿ ಮೈಸೂರನ್ನು ಮಾದಕ ವಸ್ತು ಮುಕ್ತಗೊಳಿಸಲು ನಗರ ಪೊಲೀಸರು ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು, ಇದುವರೆಗೆ ಸುಮಾರು 30 ಡ್ರಗ್ ಪೆಡ್ಲರ್‌ಗಳನ್ನು ನಗರದಿಂದ ಗಡಿಪಾರು ಮಾಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

​ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

- Advertisement - 

​ಪೆಡ್ಲರ್‌ಗಳ ವಿರುದ್ಧ ಕಠಿಣ ಕ್ರಮ:
​ಮಾದಕ ವಸ್ತು ನಿಯಂತ್ರಣಕ್ಕಾಗಿ ವಿಶೇಷ ಕಾರ್ಯಕ್ರಮಗಳು ಹಾಗೂ ಪ್ರದೇಶವಾರು ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಈ ವೇಳೆ ಪತ್ತೆಯಾದ 30 ಪೆಡ್ಲರ್‌ಗಳನ್ನು ಗಡಿಪಾರು ಮಾಡಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಒಬ್ಬ ಹಳೆಯ ಪೆಡ್ಲರ್‌ನನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ.

​”ಕೆಲವರು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿತರಾಗಿ ಜಾಮೀನು ಪಡೆದು ಹೊರಬಂದ ನಂತರವೂ ಷರತ್ತುಗಳನ್ನು ಉಲ್ಲಂಘಿಸಿ ಮಾದಕ ದ್ರವ್ಯ ಮಾರಾಟ ಮುಂದುವರಿಸುತ್ತಿದ್ದಾರೆ. ಅಂತವರನ್ನು ಮತ್ತೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ,” ಎಂದು ಕಮಿಷನರ್ ಎಚ್ಚರಿಸಿದರು.

- Advertisement - 

​​ಇರ್ಫಾನ್ ಪಾಷಾ ಬಂಧನ: 9 ಪ್ರಕರಣಗಳಿದ್ದರೂ ಮಾದಕ ದ್ರವ್ಯ ಮಾರಾಟ ಮುಂದುವರಿಸಿದ್ದ ಇರ್ಫಾನ್ ಪಾಷಾ ಎಂಬಾತನಿಂದ 28 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
​ರೌಡಿ ಶೀಟರ್ ದಾಖಲು: ಈತನ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಆತನ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ.

​ ವಾರಸುದಾರರಿಗೆ ಮೊಬೈಲ್ ಹಸ್ತಾಂತರ:
​ಇದೇ ವೇಳೆ ಮೊಬೈಲ್ ಕಳ್ಳತನ ಮತ್ತು ಪತ್ತೆಯ ಬಗ್ಗೆ ಮಾಹಿತಿ ನೀಡಿದ ಸೀಮಾ ಲಾಟ್ಕರ್ ಅವರು
, ಸಾರ್ವಜನಿಕರು ಮೊಬೈಲ್ ಕಳೆದುಹೋದಾಗ ಆತಂಕಪಡದೆ ತಂತ್ರಜ್ಞಾನದ ನೆರವು ಪಡೆಯುವಂತೆ ಸೂಚಿಸಿದರು.

​ಪೊಲೀಸ್ ಇಲಾಖೆಯ ಸಾಧನೆ:
​ಕಳೆದ 3 ತಿಂಗಳಲ್ಲಿ ಕಳ್ಳತನವಾಗಿದ್ದ 144 ಮೊಬೈಲ್‌ಗಳ ಪತ್ತೆ. ​ಒಟ್ಟಾರೆಯಾಗಿ 220 ಮೊಬೈಲ್‌ಗಳನ್ನು ಟ್ರೇಸ್ ಮಾಡಲಾಗಿದ್ದು
, ಈ ಪೈಕಿ 197 ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ.

​ಸಾರ್ವಜನಿಕರಿಗೆ ಸಲಹೆಗಳು:
ಪೋರ್ಟಲ್ ಬಳಕೆ: ಮೊಬೈಲ್ ಕಳೆದುಹೋದರೆ ಕೂಡಲೇ ಸಿ.ಇ.ಐ.ಆರ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿ.
​ಇ-ಲಾಸ್ಟ್ ಆ್ಯಪ್: ಈ ಆ್ಯಪ್ ಮೂಲಕ ದೂರು ನೀಡಿ ಮತ್ತು
IMEI ಸಂಖ್ಯೆಯನ್ನು ಬ್ಲಾಕ್ ಮಾಡಿ. ಇದರಿಂದ ಕಳ್ಳರು ಬೇರೆ ಸಿಮ್ ಹಾಕಿ ಮೊಬೈಲ್ ಬಳಸಲು ಸಾಧ್ಯವಾಗುವುದಿಲ್ಲ.

​ಮೈಸೂರು ನಗರದ ಸುರಕ್ಷತೆ ಮತ್ತು ಮಾದಕ ವಸ್ತುಗಳ ತಡೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

 

 

 

 

Share This Article
error: Content is protected !!
";