ಜಾತಿ ನಿಂದನೆ ಪ್ರಕರಣದಲ್ಲಿ ಮಾಲೀಕರ ಅರ್ಜಿ ವಜಾಗೊಳಿಸಿದ ಹೈಕೋರ್ಟ್​

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರ್ಖಾನೆಯ ಸರಕು ಸಾಗಣೆ ದ್ವಾರವು ಸಾರ್ವಜನಿಕ ಪ್ರದೇಶವೇ ಆಗಿದ್ದು, ಅಲ್ಲಿ ನೌಕರನಿಗೆ ಜಾತಿ ನಿಂದನೆ ಮಾಡಿರುವುದು ಅಪರಾಧ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಧಾರವಾಡದ ಕಾರ್ಖಾನೆಯ ಮಾಲೀಕರು ಸಲ್ಲಿಸಿದ್ದ ಎಫ್‌ಐಆರ್ ರದ್ದತಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

​ಪ್ರಕರಣದ ಹಿನ್ನೆಲೆ:
​ಧಾರವಾಡದ ಸ್ವಮ್ಸ್‌ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ಕಂಪೆನಿಯಲ್ಲಿ 20 ವರ್ಷಗಳಿಂದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಕರಿಗಪ್ಪ ಹರಿಜನ್ ಎಂಬುವವರು ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು. 2024ರ ಜೂನ್‌ನಲ್ಲಿ ಮಾಲೀಕರು ಮೂರನೇ ವ್ಯಕ್ತಿಯೊಬ್ಬರ ಮೇಲೆ ಸುಳ್ಳು ದೂರು ನೀಡುವಂತೆ ಒತ್ತಡ ಹೇರಿದ್ದರು. ಇದಕ್ಕೆ ಒಪ್ಪದಿದ್ದಾಗ, ಇತರೆ ಕಾರ್ಮಿಕರ ಸಮ್ಮುಖದಲ್ಲೇ ಮಾಲೀಕರು ಯಲ್ಲಪ್ಪ ಅವರಿಗೆ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

- Advertisement - 

​ಹೈಕೋರ್ಟ್ ನೀಡಿದ ಪ್ರಮುಖ ಅಂಶಗಳು:
​ಸಾರ್ವಜನಿಕ ಸ್ಥಳದ ವ್ಯಾಖ್ಯಾನ: ಸಾರ್ವಜನಿಕ ಸ್ಥಳ ಎಂದರೆ ಕೇವಲ ರಸ್ತೆ ಅಥವಾ ಪಾರ್ಕ್ ಮಾತ್ರವಲ್ಲ. ಕಾರ್ಖಾನೆಯ ದ್ವಾರದಲ್ಲಿ ಕಾರ್ಮಿಕರ ಓಡಾಟ ಇರುವುದರಿಂದ ಅದನ್ನು ಸಾರ್ವಜನಿಕ ಪ್ರದೇಶಎಂದೇ ಪರಿಗಣಿಸಬೇಕು. ಅಲ್ಲಿರುವ ಸಹೋದ್ಯೋಗಿಗಳೇ ಸಾರ್ವಜನಿಕರುಎಂದು ನ್ಯಾಯಮೂರ್ತಿ ಹಂಚಾಟೆ ಸಂಜೀವ ಕುಮಾರ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

​ಜಾತಿ ನಿಂದನೆ ಅಪರಾಧ: ಇತರರ ಸಮ್ಮುಖದಲ್ಲಿ ಜಾತಿ ನಿಂದನೆ ಮಾಡಿರುವುದು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(ಆರ್) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ.

- Advertisement - 

​ದೂರು ನೀಡಲು ವಿಳಂಬ ಸಮರ್ಥನೀಯ: ಘಟನೆ ನಡೆದ ಆರು ತಿಂಗಳ ನಂತರ ದೂರು ನೀಡಲಾಗಿದೆ ಎಂಬ ಮಾಲೀಕರ ವಾದವನ್ನು ಪೀಠ ತಳ್ಳಿಹಾಕಿದೆ. “ಬಡ ಕಾರ್ಮಿಕನಿಗೆ ಕೆಲಸ ಕಳೆದುಕೊಳ್ಳುವ ಭೀತಿ ಇರುವುದು ಸಹಜ. ಜೀವನೋಪಾಯದ ದೃಷ್ಟಿಯಿಂದ ತಕ್ಷಣ ದೂರು ನೀಡದಿರುವುದು ಅಸಹಜವಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

​ದೂರಿನಲ್ಲಿ ಸತ್ಯಾಂಶ: ದೂರುದಾರ ಸುಳ್ಳು ಪ್ರಕರಣ ದಾಖಲಿಸುವ ಉದ್ದೇಶ ಹೊಂದಿದ್ದರೆ ಇತ್ತೀಚಿನ ದಿನಾಂಕವನ್ನೇ ನೀಡುತ್ತಿದ್ದ. ಆರು ತಿಂಗಳ ಹಳೆಯ ಘಟನೆಯನ್ನು ಉಲ್ಲೇಖಿಸಿರುವುದು ಮೇಲ್ನೋಟಕ್ಕೆ ದೂರಿನಲ್ಲಿ ಸತ್ಯಾಂಶವಿದೆ ಎಂಬುದನ್ನು ತೋರಿಸುತ್ತದೆ ಎಂದು ಕೋರ್ಟ್ ಹೇಳಿದೆ.

​ಆದೇಶದ ಮಹತ್ವ:
​ಕಾರ್ಖಾನೆಯ ಮಾಲೀಕರಾದ ಶ್ಯಾಮ್ ಮೆಹ್ತಾ, ಬಿಮಲ್‌ಮೆಹ್ತಾ ಮತ್ತು ನೀಪಾ ಮೆಹ್ತಾ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 504, 506 ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಿಸಿರುವ ಪ್ರಕರಣದ ತನಿಖೆ ಮುಂದುವರಿಯಲಿದೆ. ಕೆಲಸದ ಸ್ಥಳದಲ್ಲಿ ಗೌರವಯುತ ವಾತಾವರಣ ಇರಬೇಕು ಮತ್ತು ಅಲ್ಲಿಯೂ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುತ್ತದೆ ಎಂಬುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ.

 

Share This Article
error: Content is protected !!
";