ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1 ರಲ್ಲಿ ಶೇ.78..04 ರಷ್ಟು ಫಲಿತಾಂಶ ಪಡೆದಿದೆ. ಕಾಲೇಜಿನ 462 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 54, ವಿಜ್ಞಾನ ವಿಭಾಗದಲ್ಲಿ ಮತ್ತು ಕಲಾ ವಿಭಾಗದಲ್ಲಿ 7 ಸೇರಿ ಒಟ್ಟು 84 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ, 288 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಂ.ರಮ್ಯ 588 ಅಂಕಗಳನ್ನು ಪಡೆಯುವ ಮೂಲಕಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಂ.ರಮ್ಯ ವಿದ್ಯಾರ್ಥಿನಿ ಕನ್ನಡ ಭಾಷೆ, ಲೆಕ್ಕಶಾಸ್ತ್ರ ಮತ್ತು ಗಣಕ ವಿಜ್ಞಾನ ಈ ಮೂರು ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಎಂ.ಪ್ರದೀಪ್ ವಿದ್ಯಾರ್ಥಿ 568 ಅಂಕಗಳನ್ನು ಮತ್ತು ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಎಂ.ಪವಿತ್ರ 555 ಅಂಕಗಳನ್ನು ಪಡೆದಿದ್ದಾರೆ.
ಶೇ.100 ರಷ್ಟು ಫಲಿತಾಂಶ :- ಶ್ರೀ ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜಿನ ಐಚ್ಛಿಕ ಕನ್ನಡ, ಸಂಸ್ಕೃತ, ಉರ್ದು, ಹಿಂದಿ, ಭೂಗೋಳ ಶಾಸ್ತ್ರ, ಲೆಕ್ಕಶಾಸ್ತ್ರ, ಮೂಲಗಣಿತ ವಿಷಯಗಳಲ್ಲಿ ಶೇ.100 ಫಲಿತಾಂಶಗ ಬಂದಿದೆ.
100 ಕ್ಕೆ 100 ಅಂಕಗಳು : ಕನ್ನಡ ಭಾಷೆಯಲ್ಲಿ 4, ಸಂಸ್ಕೃತ 4, ಅರ್ಥಶಾಸ್ತ್ರ 2, ಲೆಕ್ಕಶಾಸ್ತ್ರ 3, ವ್ಯವಹಾರ ಅಧ್ಯಯನ 6, ಸಂಖ್ಯಾಶಾಸ್ತ್ರ 1, ಮೂಲಗಣಿತ 1, ಗಣಕವಿಜ್ಞಾನ 4 ವಿದ್ಯಾರ್ಥಿಗಳು 100 ಅಂಕಗಳಿಗೆ 100 ಅಂಕಗಳನ್ನು ಪಡೆದಿದ್ದಾರೆ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಸೇರಿದಂತೆ ಒಟ್ಟು 594 ವಿದ್ಯಾರ್ಥಿಗಳಲ್ಲಿ 462 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಶ್ರೀ ಕೊಂಗಾಡಿಯಪ್ಪಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಶ್ರೀನಿವಾಸ್ ತಿಳಿಸಿದ್ದಾರೆ.

