ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೊಡ್ಡಬಳ್ಳಾಪುರ ತಾಲೂಕು ಕ್ಷೇಮಾವನ ಟ್ರಸ್ಟ್ ಬೆಂಗಳೂರು ಗ್ರಾಮಾಂತರ ಇವರ ಸಂಯುಕ್ತಾಶ್ರಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಪಾಲ್ ಪಾಲ್ ದಿನ್ನೆ ಕೆರೆ ಕಾಮಗಾರಿ ಭೂಮಿ ಪೂಜೆ ನಡೆಯಿತು.
ಕಾರ್ಯಕ್ರಮ ವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರು, ರಾಜ್ಯ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಉದ್ಘಾಟಿಸಿದರು.
ಜಿಲ್ಲಾ ನಿರ್ದೇಶಕರಾದ ಉಮರಬ್ಬ ,ಘಾಟಿ ಪ್ರಾಧಿಕಾರ ಸದಸ್ಯರಾದ ಶ್ರೀ ರಂಗಪ್ಪ, ಶ್ರೀ ಲಕ್ಷ್ಮಿ ನಾಯ್ಕ್, ಶ್ರೀ ನಾಗಭೂಷಣ್ ಪ್ರಾದೇಶಿಕ ಕಛೇರಿಯ ಕೆರೆ ಅಭಿಯಂತರರಾದ ಭರತ್ , ತಾಲ್ಲೂಕು ಯೋಜನಾಧಿಕಾರಿ ದಿನೇಶ್ ,ಗ್ರಾ ಪಂಚಾಯತ್ ಸದಸ್ಯರಾದ ಕೃಷ್ಣ ನಾಯ್ಕ್, ಜಿಲ್ಲಾಧಿಕಾರಿ ಕಚೇರಿ ಇಂಜಿನಿಯರ್ ರವಿಚಂದ್ರ, ಕೆರೆ ನೋಡೆಲ್ ಅಧಿಕಾರಿ ಹಾಗೂ ತಾಲೂಕು ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ,ವಲಯದ ಮೇಲ್ವಿಚಾರಕರಾದ ಈರಣ್ಣ, ಒಕ್ಕೂಟದ ಅಧ್ಯಕ್ಷ ಧನಂಜಯ್, ಮುನಿರಾಜ್ ಸೇವಾ ಪ್ರತಿನಿದಿ ರಿಜ್ವಾನ, ಶೈಲಜಾ, ಶೃತಿ ಉಪಸ್ಥಿತರಿದ್ದರು.

