ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೈನ್ಸ್ ಎಂದರೆ ಕಬ್ಬಿಣದ ಕಡಲೆ ಎನ್ನುವಂತೆ ಇರುವ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗಡಿ ಗ್ರಾಮ ಟಿ.ಕಲ್ಲಹಳ್ಳಿಯ ಕಲ್ಲಹಳ್ಳಿಮಠದ ಕೆ.ಎಂ.ಬಸಯ್ಯ ಮತ್ತು ಏಕಾಂತಮ್ಮನವರ ಕುಟುಂಬದ ಮೊಮ್ಮಗಳು ಹಾಗೂ ಖ್ಯಾತ ಸಾಹಿತಿ ಡಾ. ಉಬಾಮ ಅವರ ಅಣ್ಣನ ಮಗಳು ಕುಮಾರಿ ರಂಜಿತ ಪ್ರಥಮ ಸ್ಥಾನ ಪಡೆದಿದ್ದಾಳೆ.
ಚಿತ್ರದುರ್ಗ ನಗರದ ಚಿನ್ಮುಲ್ಲಾದ್ರಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ತಲಾ ಇಬ್ಬರು ವಿದ್ಯಾರ್ಥಿಗಳು ಹಂಚಿಕೊಂಡಿರುವುದು ವಿಶೇಷ. ಈ ಮೂಲಕ ತೀವ್ರ ಪೈಪೋಟಿಯ ನಡುವೆ
ರಂಜಿತ ಸ್ವಾಮಿ. ಎಂ 578 ಅಂಕ (96.3%) ಗಳಿಸಿ ಸಿ. ಎನ್. ಸಿ ಕಾಲೇಜು ಹಾಗೂ ಗ್ರಾಮಕ್ಕೆ ಹೆಸರು ತಂದಿರುತ್ತಾಳೆ.
ವಿದ್ಯಾರ್ಥಿಯ ಅಮೋಘ ಸಾಧನೆಗೆ ಸಿಎನ್ಸಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಕಾಲೇಜಿನ ಡೀನ್ ಆದ ಶ್ರೀ ಗೋಪಾಲ್, ಪ್ರಾಂಶುಪಾಲರಾದ ಶ್ರೀ ನಾಗರಾಜ್. ಬಿ, ಹಾಗೂ ಉಪಪ್ರಾಂಶುಪಾಲರಾದ ಶ್ರೀ ಮಂಜುನಾಥ್. ಹೆಚ್.ಪಿ ಅವರು ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಎಲ್ಲಾ ಬೋಧಕ ವರ್ಗದವರಿಗೂ ಮತ್ತು ಸಾಧಕ ವಿದ್ಯಾರ್ಥಿಗಳಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

