ಚಂದ್ರವಳ್ಳಿ ನ್ಯೂಸ್, ತುಮಕೂರು:
ರಾಮನಗರ ಜಿಲ್ಲೆ, ಅಂಕನಹಳ್ಳಿ ಮೂಲದ ೧೮ ವರ್ಷದ ಹಂಸ @ ದರ್ಶಿನಿ ಎಂಬ ಗೃಹಿಣಿಯು ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿ ಯಡಿಯೂರಿನಲ್ಲಿ ಆಗಸ್ಟ್ ೧೮ರಂದು ಕಾಣೆಯಾಗಿದ್ದಾಳೆ ಎಂದು ಪಿರ್ಯಾದಿ ಮುತ್ತುರಾಜು ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ಹಂಸ ೪.೫ ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಹೊಂದಿದ್ದು, ನೀಲಿ ಬಣ್ಣದ ಚೂಡಿದಾರ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾಳೆ. ಈಕೆಯ ಬಗ್ಗೆ ಸುಳಿವು ಸಿಕ್ಕವರು ದೂರವಾಣಿ ಸಂಖ್ಯೆ: ೦೮೧೩೨-೨೨೫೨೨೯/ ೨೨೦೨೯೪, ಮೊ.ಸಂ. ೯೪೮೦೮೦೨೯೬೩-೩೬-೦೦ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಅಮೃತೂರು ಪೊಲೀಸ್ ಠಾಣೆ ಸಬ್ ಇನ್ಸ್‌ಸ್ಪೆಕ್ಟರ್ ಮನವಿ ಮಾಡಿದ್ದಾರೆ.