ಚಂದ್ರವಳ್ಳಿ ನ್ಯೂಸ್, ಉಡುಪಿ:
ಉಡುಪಿ ಮೂಲದ ಮಹಿಳೆಯೊಬ್ಬಳು ತನ್ನನ್ನು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಪರಿಚಯಿಸಿಕೊಂಡು ಹಲವರನ್ನು ಮದುವೆಯಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಉಡುಪಿ ನಿವಾಸಿ ತಬುಸುಮ್ ತಾಜ್ (40) ಎಂಬಾಕೆ ಇದುವರೆಗೆ 8 ಜನರನ್ನು ಮದುವೆಯಾಗಿ ವಂಚಿಸಿದ್ದಾಳೆ. ಮದುವೆಯಾಗಿ ಹೆಂಡತಿ ಬಿಟ್ಟಿರುವ ಅಥವಾ ವಿಧುರ ಶ್ರೀಮಂತ ಗಂಡಸರನ್ನೇ ಈಕೆ ಟಾರ್ಗೆಟ್ ಮಾಡುತ್ತಿದ್ದಳು. ಹೀನಾ ಎಂಟರ್‌ಪ್ರೈಸಸ್ ಎಂಬ ಆಫೀಸ್ ಮಾಡಿಕೊಂಡು ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ ಕೊಡಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಳು. 18 ವರ್ಷದಿಂದ ಈ ವ್ಯವಹಾರ ಮಾಡಿಕೊಂಡಿದ್ದಳು. ಸ್ಪೀಕರ್‌ಯು.ಟಿ. ಖಾದರ್ ಬಳಿ ಬ್ಲ್ಯಾಕ್‌ಮನಿ ಇದೆ. ಅದನ್ನು ವೈಟ್ ಮಾಡಲು ಈ ಬ್ಯುಸಿನೆಸ್ ಮಾಡುತ್ತಿದ್ದೇವೆ ಎಂದು ಜನರನ್ನು ನಂಬಿಸಿದ್ದಳು.
1 ಕೋಟಿ ರೂ. ಲೋನ್ ಬೇಕಾದರೆ 15 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಳು. 10 ದಿನದಲ್ಲಿ ಲೋನ್ ಕೊಡಲಾಗುತ್ತೆ ಎಂದು ಭರವಸೆ ನೀಡಿ ವಂಚಿಸುತ್ತಿದ್ದಳು. ರಾಜ್ಯದಾದ್ಯಂತ 38 ಕೋಟಿ ರೂ.ಗೂ ಅಧಿಕ ಹಣ ಸಾವಿರಾರು ಜನರಿಗೆ ಮೋಸ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಈಕೆಯ ವಿರುದ್ಧ ತುಮಕೂರು, ಭದ್ರಾವತಿ, ಶಿವಮೊಗ್ಗ, ಮಂಗಳೂರು, ಉಡುಪಿ, ಮಣಿಪಾಲ, ಕಾಪು, ವಿಜಯನಗರ ಜಿಲ್ಲೆಯ ಹಡಗಲಿ, ಹೊಸಪೇಟೆ ಬಡಾವಣೆ ಹಾಗೂ ಶಹತ ಪೊಲೀಸ್ ಠಾಣೆಯಲ್ಲಿ ಈಕೆಯ ವಿರುದ್ಧ ಚೆಕ್ ಬೌನ್ಸ್ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಲಾಯರ್ ಮೂಲಕ ದುಡ್ಡು ವಾಪಸ್ ಕೇಳುವವರಿಗೆ ಕೇಸ್ ದಾಖಲಿಸುವ ಭಯ ಹುಟ್ಟಿಸುತ್ತಿದ್ದಳು. ಚೆಕ್ ಬರೆಸಿಕೊಂಡು ಚೆಕ್ ಬೌನ್ಸ್ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಳು ಎಂದು ತಿಳಿದು ಬಂದಿದೆ. ಈಕೆಯ ವಂಚನೆಯ ವಿಚಾರ ತಿಳಿದ ಮೇಲೆ 6ನೇ ಗಂಡ ರಾಜಾಹುಸೇನ್ ಎಂಬಾತ ಮಹಿಳೆಯನ್ನು ಪ್ರಶ್ನಿಸಿದ್ದು, ಆತನ ಮೇಲೂ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಳು ಎಂದು ತಿಳಿದು ಬಂದಿದೆ. ಈ ಮಹಿಳೆಯ ಮೇಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂಚನೆ ಕೇಸ್ ದಾಖಲಾಗಿದೆ.
10ನೇ ತರಗತಿ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕನಿಂದಲೇ ಲೈಂಗಿಕ ಕಿರುಕುಳ
ಚಂದ್ರವಳ್ಳಿ ನ್ಯೂಸ್, ಡೆಹ್ರಾಡೂನ್:
10 ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಶಾಲಾ ಶಿಕ್ಷಕನಿಂದಲೇ ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದಾಗಿ ದೂರು ದಾಖಲಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಘಟನೆ ನಡೆದಿದೆ. ತನ್ನ ಶಾಲೆಯ ಶಿಕ್ಷಕನೇ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ವಾಟ್ಸಪ್‌ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ತನಗೆ ಬೆತ್ತೆಲೆ ಫೋಟೋಗಳನ್ನು ಕಳಿಸಿದ್ದಾನೆ. ಈ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಲ್ದ್ವಾನಿ ವೃತ್ತ ನಿರೀಕ್ಷಕ ನಿತಿನ್ ಲೋಹಾನಿ ಮಾಹಿತಿ ನೀಡಿದ್ದು, ಹಲ್ದ್ವಾನಿಯ ಖಾಸಗಿ ಶಾಲೆಯೊಂದರ ಶಿಕ್ಷಕನೊಬ್ಬ ಸೋಷಿಯಲ್‌ಮೀಡಿಯಾದಲ್ಲಿ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳನ್ನ ಕಳಿಸಿದ್ದಾನೆ. ಈ ಬಗ್ಗೆ ದೂರು ಸ್ವೀಕರಿಸಿ, ಎಫ್‌ಐಆರ್‌ದಾಖಲಿಸಿದ್ದು, ತನಿಖೆ ಪ್ರಾರಂಭಿಸಿದ್ದೇವೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?:
ಇಲ್ಲಿನ ಖಾಸಗಿ ಶಾಲೆಯ ಶಿಕ್ಷಕ, ತನ್ನ ವಿದ್ಯಾರ್ಥಿನಿಗೆ ಆಗಾಗ್ಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಆಕೆಗೆ ಅನುಚಿತ ಸಂದೇಶಗಳನ್ನ ಕಳಿಸಿದ್ದಾನೆ. ಮೆಸೇಜ್‌ಜೊತೆಗೆ ಸ್ನ್ಯಾಪ್‌ಚಾಟ್‌ಮತ್ತು ವಾಟ್ಸಪ್‌ಗಳಲ್ಲಿ ತನ್ನ ಬೆತ್ತಲೆ ಫೋಟೋಗಳನ್ನ ವಿದ್ಯಾರ್ಥಿನಿಗೆ ಕಳಿಸಿದ್ದಾನೆ. ಇದರಿಂದ ಮಾನಸಿಕ ತೊಂದರೆಗೆ ಒಳಗಾದ ವಿದ್ಯಾರ್ಥಿನಿ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ನಂತರ ಪೋಷಕರು ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.