ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಾವು ಮಾಡಿದ ಸೇವೆ ಸಾರ್ಥಕತೆಗೊಳ್ಳಬೇಕಾದರೆ ಅಗತ್ಯವಿದ್ದಲ್ಲಿ ಮಾತ್ರ ಮಾಡಬೇಕು. ಹೊಟ್ಟೆ ತುಂಬಿದ ಸ್ಥಳದಲ್ಲಿ ನಮ್ಮ ಸೇವೆ ಸಾರ್ಥಕವಾಗುವುದಿಲ್ಲ ಎಂದು ನಿವೃತ್ತ ಸರ್ಕಾರಿ ನೌಕರರು ಹಾಗೂ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸದಸ್ಯರಾದ ವೇದಾವತಿ ಅಭಿಮತ ವ್ಯಕ್ತಪಡಿಸಿದರು.
ಸಾಗರ ರಸ್ತೆಯ ಹಾನಗಲ್ ಶ್ರೀ ಕುಮಾರ ಸ್ವಾಮಿಗಳ ಸಭಾಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಪಂಚಾಕ್ಷರಿ ಗವಾಯಿಗಳ ಅಂಧರ ಶಾಲೆಗೆ ಸಂಗೀತ ಪರಿಕರಗಳಾದ ತಬಲಾ, ಹಾರ್ಮೋನಿಯಂ ಹಾಗೂ ವಸ್ತು ವಿತರಿಸಿ ಮಾನಾಡಿದ ಅವರು, ಇಂತಹ ಸಂಸ್ಥೆಗಳಿಗೆ ಅಗತ್ಯ ನೆರವು ನೀಡಿದರೆ ಅಂಧ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಕ್ಕಾಗ, ಸಂಗೀತಕ್ಕೆ ಹೆಚ್ಚು ಸಹಕಾರ ನೀಡಿದಂತಾಗುತ್ತದೆ ಎಂದರು.
ಇನ್ನರ್ ವೀಲ್ ಶಿವಮೊಗ್ಗ ಪೂರ್ವ ನೂತನ ಸದಸ್ಯೆ ಸವಿತಾ ಪಾಲಕರವರು, ಆಶ್ರಮದ ಮಕ್ಕಳಿಗೆ ಟವಲ್, ಬ್ರಷ್, ಸೋಪು ಹಾಗೂ ಅಗತ್ಯ ವಸ್ತುಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷ ವಾಗ್ದೇವಿ ಬಸವರಾಜ್ ವಹಿಸಿ, ಪಂಚಾಕ್ಷರಿಗಳ ಸಂಗೀತ ಸೇವೆ ಅಜರಾಮರ, ಸಾವಿರಾರು ಆಂಧ ವಿದ್ಯಾರ್ಥಿಗಳು ಗದುಗಿನ ಗದುಗಿನ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿ, ಈ ನಾಡಿನ ಶ್ರೇಷ್ಠ ಸಂಗೀತಗಾರರಾಗಿದ್ದಾರೆ. ಇಲ್ಲಿನ ಶಿಷ್ಯರು ದೇಶದಲ್ಲಿ ದೊಡ್ಡ ಮಟ್ಟದ ವಿದ್ವಾಂಸರಾಗಿ, ಹಾಡುಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರದಲ್ಲಿ ಇನ್ನರ್ ವೀಲ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಬಿಂದು ವಿಜಯ್ ಕುಮಾರ್, ಕಾರ್ಯದರ್ಶಿ ಲತಾ ಸೋಮಣ್ಣ, ಸತ್ಯ ಹಾಗೂ ಬಂಧುಗಳ ಸಂಗಮೇಳ ಗವಾಯಿಗಳಿಗೆ ಅಭಿನಂದಿಸಿ ಸನ್ಮಾನಿಸಿದರು.