ಮಗುವಿನ ಜೀವನದಲ್ಲಿ ಶಿಕ್ಷಣದಷ್ಟೇ ಅವಕಾಶಗಳು ಪ್ರಮುಖ ಪಾತ್ರ ವಹಿಸುತ್ತವೆ: ಡಾ.ಪ್ರೀತಿ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಶಿವಮೊಗ್ಗದ ಮನಸ್ಫೂರ್ತಿ ಕಲಿಕಾ ತರಬೇತಿ ಕೇಂದ್ರದ ಶೈಕ್ಷಣಿಕ ನಿರ್ದೇಶಕರಾದ ಡಾ.ಪ್ರೀತಿ.ವಿ.ಶಾನ್ ಬಾಗ್
,‌ಡಾ.ವಿದ್ಯಾ ಹಾಗೂ ಮನೋಚಿಕಿತ್ಸಕರಾದ ಶ್ರೀ ಗಣೇಶ್ ರವರುಗಳ ಉಪಸ್ಥಿತಿಯಲ್ಲಿ ಪೋಷಕರ-ಶಿಕ್ಷಕರ ಸಭೆಯನ್ನು ಮನಸ್ಫೂರ್ತಿ ಕಲಿಕಾ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ಪ್ರೀತಿ.ವಿ.ಶಾನ್ ಬಾಗ್ ರವರು “ಮಗುವಿನ ಜೀವನದಲ್ಲಿ ಶಿಕ್ಷಣದಂತೆ ಅವಕಾಶಗಳೂ ಸಹ ಪ್ರಮುಖ ಪಾತ್ರ ವಹಿಸುತ್ತವೆ” ಎಂದು ತಿಳಿಸಿದರು. 

- Advertisement - 

ಡಾ.ವಿದ್ಯಾರವರು ಕಲಿಕಾ ನ್ಯೂನ್ಯತೆಯನ್ನು ಗುರುತಿಸುವ ವಿಚಾರಗಳ ಬಗ್ಗೆ ಬೆಳಕನ್ನು ಚೆಲ್ಲಿವ ಕುರಿತು ಮಾತನಾಡುತ್ತಾ “ಪೋಷಕರು ಇದನ್ನು ಗುರುತಿಸಿ ಮಕ್ಕಳ ಎಲ್ಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ಅವರಿಗೆ ಬೆಂಬಲ ನೀಡಬೇಕೆಂದು” ಸಲಹೆ ನೀಡಿದರು.

- Advertisement - 

ಮನೋಚಿಕಿತ್ಸಕರಾದ ಶ್ರೀ ಗಣೇಶ್ ರವರು ಮಾತನಾಡುತ್ತಾ “ಮಕ್ಕಳಲ್ಲಿನ ನ್ಯೂನ್ಯತೆಗಳನ್ನು ಗುರುತಿಸಿ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವಲ್ಲಿ ಹಾಗೂ ಮಕ್ಕಳನ್ನು ಈ ಸಮಸ್ಯೆಗಳಿಂದ ಹೊರತರುವಲ್ಲಿ ಪೋಷಕರ ಪಾತ್ರ ಅತ್ಯಂತ ನಿರ್ಣಾಯಕವಾದದ್ದು” ಎಂದು ಅಭಿಪ್ರಾಯಪಟ್ಟರು.

ಈ ಸಭೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪೋಷಕರ ಸಭೆಯ ಉದ್ದೇಶವನ್ನು ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದ ಸಂಯೋಜಕರಾದ ಶ್ರೀಮತಿ ರಂಗನಾಯಕಿಯವರು ತಿಳಿಸಿದರು. ಈ ಸಭೆಯಲ್ಲಿ ಸುಮಾರು 40 ಕ್ಕಿಂತಲೂ ಹೆಚ್ಚು ಪೋಷಕರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು. ಮನಸ್ಪೂರ್ತಿ ಕಲಿಕಾ ಕೇಂದ್ರದ ಎಲ್ಲಾ ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement - 

 

 

Share This Article
error: Content is protected !!
";