ಸರ್ಕಾರ ಅಸ್ಥಿರಗೊಳಿಸಲು ಕೋಮುವಾದಿ ಬಿಜೆಪಿ ಯತ್ನ-ಲಕ್ಷ್ಮೀ ಹೆಬ್ಬಾಳ್ಕರ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಕೋಮುವಾದಿ ಬಿಜೆಪಿ ವಿರುದ್ದ ಕಾರ್ಯಕರ್ತರು ಪುಟಿದೇಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸೋಮವಾರ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವೆ ರಾಜ್ಯದಲ್ಲಿ ಬಿಜೆಪಿ. ಅಧಿಕಾರದಲ್ಲಿದ್ದಾಗ ನೀರಾವರಿ, ಕೈಗಾರಿಕೆ, ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚುವರಿ ಹಣ ನೀಡಿ ರಾಜ್ಯದ ಖಜಾನೆಯನ್ನು ದಿವಾಳಿಯಾಗಿಸಿತ್ತು. ಪಿ.ಎಸ್.ಐ. ಇಂಜಿನಿಯರಿಂಗ್ ನೇಮಕ ಕೋವಿಡ್‌ನಲ್ಲಿ ನಡೆದ ಹಗರಣವನ್ನು ಎಲ್ಲಿ ಬಿಚ್ಚಿಡುತ್ತಾರೋ ಎಂಬ ಭಯದಿಂದ ಬಿಜೆಪಿ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಇಲ್ಲ ಸಲ್ಲದ ಅಪವಾದ ಹೊರಿಸುತ್ತಿದೆ.

ರಾಜ್ಯಾದ್ಯಂತ ಕಾರ್ಯಕರ್ತರು ಮುಖಂಡರುಗಳು ಸಿ.ಎಂ.ಬೆನ್ನಿಗೆ ನಿಲ್ಲಬೇಕೆಂದು ಕರೆ ನೀಡಿದರು.ಕಾರ್ಯಕರ್ತರಿಲ್ಲದೆ ಪಕ್ಷವಿಲ್ಲ. ಪಕ್ಷದ ಆಶೀರ್ವಾದಿಂದ ಸಾಮಾನ್ಯ ಕಾರ್ಯಕರ್ತೆಯಾಗಿ ಈಗ ಸಚಿವೆಯಾಗಿ ರಾಜ್ಯದ ಜನರ ಸೇವೆ ಮಾಡುತ್ತಿದ್ದೇನೆ. ನಾಲ್ಕು ವರ್ಷ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆಯಾಗಿದ್ದೇನೆ. ನನಗೆ ಎರಡು ಬಾರಿ ಪಕ್ಷ ಟಿಕೇಟ್ ನೀಡಿದಾಗ ಸೋತರೂ ಎದೆಗುಂದಲಿಲ್ಲ. ೨೪ ವರ್ಷಗಳಿಂದ ನಾನೂ ಕೂಡ ಸಾಕಷ್ಟು ತಳಮಳ ಅನುಭವಿಸಿದ್ದೇನೆ. ಒಮ್ಮೆಲೆ ಎಲ್ಲಾ ಅಧಿಕಾರ ಸಿಗುವುದಿಲ್ಲ. ತಳಮಟ್ಟದಿಂದ ಪಕ್ಷಕ್ಕೆ ದುಡಿಯಬೇಕೆಂದು ಹೇಳಿದರು.ಶಿಸ್ತಿನ ಪಕ್ಷ ಕಾಂಗ್ರೆಸ್‌ಗೆ ಎಷ್ಟೋ ಮಂದಿ ಜೀವ ತೇದು ತ್ಯಾಗ ಮಾಡಿದ್ದಾರೆ.

ಬಲಿದಾನಗಳ ಇತಿಹಾಸವಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ.ಯನ್ನು ತೊಲಗಿಸಿ ರಾಜ್ಯದ ಜನ ೧೩೬ ಸೀಟುಗಳನ್ನು ಕಾಂಗ್ರೆಸ್‌ಗೆ ನೀಡಿದ್ದಾರೆ. ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಬಾರದು ೨೦೨೮ ರ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ತೊಡಬೇಕು. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೇ ತಯಾರಾಗಿ ಪಕ್ಷವನ್ನು ಗೆಲ್ಲಿಸಬೇಕು. ಅಭಿವೃದ್ದಿಯೆಂದರೆ ಬರಿ ರಸ್ತೆ ನಿರ್ಮಾಣ ಮಾಡುವುದಷ್ಟೆ ಅಲ್ಲ. ಪ್ರತಿಯೊಬ್ಬರ ಮನೆ ಆರ್ಥಿಕವಾಗಿ ಸಬಲವಾಗುವುದೆ ನಿಜವಾದ ಅಭಿವೃದ್ದಿ ಎಂದರು.

ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಮುರಳಿಧರ ಹಾಲಪ್ಪ ಮಾತನಾಡಿ ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪನವರ ನಿವಾಸವನ್ನು ಸ್ಮಾರಕವನ್ನಾಗಿ ಮಾಡುವ ಕೈಕಂರ್ಯಕ್ಕೆ ರಾಜ್ಯ ಸರ್ಕಾರ ಕೈಹಾಕಿದ್ದು, ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ವೀಕ್ಷಣೆಗೆ ಬಂದಿದ್ದಾರೆ. ನಂತರ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುವರು ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷರುಗಳಾದ ಎಸ್.ಎನ್.ರವಿಕುಮಾರ್, ನಜ್ಮತಾಜ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಘು ಪಿ. ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಮಾಜಿ ಶಾಸಕ ಎ.ವಿ.ಉಮಾಪತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಎ.ಎಂ.ಇಮಾಮ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತನಂದಿನಿಗೌಡ, ಉಪಾಧ್ಯಕ್ಷೆ ಪಿ.ಕೆ.ಪವಿತ್ರ ನಗರಸಭೆ ಅಧ್ಯಕ್ಷೆ ಸುಮಿತ ರಘು, ಮಾಜಿ ಅಧ್ಯಕ್ಷರುಗಳಾದ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಸಿ.ನಿರಂಜನಮೂರ್ತಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೋಕ್ಷರುದ್ರಸ್ವಾಮಿ, ರುದ್ರಾಣಿ ಗಂಗಾಧರ್, ಮುನಿರಾ ಎ.ಮಕಾಂದಾರ್, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಟಿಪ್ಪುಖಾಸಿಂ ಆಲಿ, ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ಮಂಜುನಾಥ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇಣುಕಶಿವು, ಉಪಾಧ್ಯಕ್ಷ ಡಿ.ಲೋಕೇಶ್ವರಪ್ಪ ಇನ್ನು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";