ಯಾವುದೇ ಆಪ್, ಲಿಂಕ್ ಮುಟ್ಟದಿದ್ದರೂ ತನ್ನಿಂತಾನೇ 2.41 ಲಕ್ಷ ರೂ. ಮಂಗ ಮಾಯ ನಿವೃತ್ತ ನೌಕರ ಕಂಗಾಲು

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಯಾವುದೇ ಆಪ್, ಲಿಂಕ್ ಮುಟ್ಟದಿದ್ದರೂ ಖಾತೆಯಿಂದ ತನ್ನಿಂತಾನಾಗಿಯೇ ಕಡಿತವಾದ ಬಗ್ಗೆ ವಿನೋಬನಗರ ಪೊಲೀಸರಿಗೆ ಬಿ ಎಸ್ ಎನ್ ಎಲ್ ನಿವೃತ್ತ ನೌಕರರೊಬ್ಬರು ದೂರು ನೀಡಿದ್ದಾರೆ.  

- Advertisement - 

ಹರಿ ಪಟ್ನಾಯಕ್ ಎನ್ನುವವರು ೨,೪೧,೦೦೦ ರೂ. ಹಣ ಕಳೆದುಕೊಂಡವರು. ಎರಡು ಬ್ಯಾಂಕಿನ ಖಾತೆಯನ್ನು ಹೊಂದಿರುವ ಪಟ್ನಾಯಕ್ ಆ.೧೬ ರಂದು ಮನೆಯಲ್ಲಿದ್ದಾಗ ವಿನೋಬನಗರದ ಬ್ಯಾಂಕ್ ಖಾತೆಯಿಂದ ಸಂಜೆ ೫ ರಿಂದ ೭ ಗಂಟೆಯವರೆಗೆ ಎರಡು ಲಕ್ಷದ ಎರಡು ಸಾವಿರ ರೂ. ಹಣ ಕಡಿತವಾಗಿದೆ. ನಂತರ ಇನ್ನೊಂದು ಬ್ಯಾಂಕ್‌ನಿಂದ ೩೯ ಸಾವಿರ ರೂ ಹಣ ಕಳೆದುಕೊಂಡಿದ್ದಾರೆ.

- Advertisement - 

ಏನೂ ಮಾಡದೆ ಸುಮ್ಮನೆ ಹಣ ಕಳೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.

 

- Advertisement - 

 

Share This Article
error: Content is protected !!
";