ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆ ರಾಜಕೀಯ ಮಗ್ಗಲು ಮುಳ್ಳಾಗಿದ್ದು ೨೦೦ ಸಹಕಾರ ಸಂಘಗಳ ಅನರ್ಹತೆ ವಿರುದ್ದ ೧೬ ಸಹಕಾರ ಸಂಘಗಳು ಮತ್ತು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೈಕೋರ್ಟ್ ಮೆಟ್ಟಿಲು ಏರಿದ್ದು ಇಂದು ಹೈಕೋರ್ಟ್ ನಲ್ಲಿ ಶಾಸಕ ಟಿ.ರಘುಮೂರ್ತಿ ಅವರ ನಿರ್ದೇಶಕ ಸ್ಥಾನಕ್ಕೆ ಸಲ್ಲಿಸಿರುವ ನಾಮಪತ್ರ ಅಂಗೀಕಾರ ಮಾಡಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸೂಚಿಸಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಸೆಪ್ಟೆಂಬರ್ ೧೨ ರಂದು ಚುನಾವಣೆ ನಿಗದಿಯಾಗಿದ್ದು ಕಳೆದ ಬಾರಿ ಮತ ಚಲಾಯಿಸಿದ್ದಂತಹ ೨೦೦ ಸೊಸೈಟಿಗಳಿಗೆ ಮತದಾನದಿಂದ ವಂಚಿತರಾಗಿದ್ದರು. ಇದರಲ್ಲಿ ಈ ನಿರ್ದೇಶಕರಾಗಿದ್ದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರನ್ನು ಸಹ ನಿರ್ದೇಶಕ ಸ್ಥಾನಕ್ಕೆ ಸ್ಫರ್ಧೆ ಮಾಡದಂತೆ ಅವರ ಪ್ರತಿನಿಧಿಸುವ ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೂಡ ಮತದಾನದಿಂದ ವಂಚಿತವಾಗಿತ್ತು.
ಅನರ್ಹತೆ ವಿರುದ್ಧ ಹೈಕೋರ್ಟ್ ಮೆಟ್ಟಿಲು ಹತ್ತಿದ ಶಾಸಕ ಟಿ.ರಘುಮೂರ್ತಿ ಅವರಿಗೆ ಮೊದಲ ಗೆಲುವು ದೊರಕಿದಂತೆ ಆಗಿದ್ದು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರತಿದೆ.
“ನಾನು ನಿರ್ದೇಶಕ ಸ್ಥಾನಕ್ಕೆ ಸ್ವರ್ಧೆ ಮಾಡಿದ್ದು ನನ್ನ ನಾಮಪತ್ರವನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಸಹಕಾರ ಸಂಘ ಅನರ್ಹ ಕಾರಣಕ್ಕೆ ತಿರಸ್ಕೃತ ಮಾಡಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ. ನಮ್ಮ ನಾಮಪತ್ರ ಅಂಗೀಕಾರ ಮಾಡಿ ಎಂದು ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಕ್ರಿಯೆ ನಡೆಸುವ ಅಧಿಕಾರಿಗಳಿಗೆ ಸೂಚನೆ ನೀಡಿದ್ದು. ನಮಗೆ ನ್ಯಾಯ ದೊರಕುವ ವಿಶ್ವಾಸವಿದೆ”. ಟಿ.ರಘುಮೂರ್ತಿ, ಶಾಸಕರು ಹಾಗೂ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಬೆಂಗಳೂರು.