ಸಾಮಾಜಿಕ ಭದ್ರತಾ ಫಲಾನುಭವಿಗಳು ಮ್ಯಾಪಿಂಗ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳ ಅಂಚೆ, ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡುವಂತೆ ಸೂಚಿಸಿದೆ.

ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ಹಾಲಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಮಾಸಾಶನ ಮೊತ್ತವನ್ನು ಪ್ರತಿ ಮಾಹೆ ವಿಳಂಬವಾಗದತೆ ಸಕಾಲದಲ್ಲಿ ಫಲಾನುಭವಿಗಳಿಗೆ ಅನುಕೂಲಕರವಾದ ಅಂಚೆ, ಬ್ಯಾಂಕ್ ಖಾತೆಗೆ 2023ರ ಡಿಸೆಂಬರ್ ಮಾಹೆಯಿಂದ ನೇರ ಹಣ ಸಂದಾಯ ಮೂಲಕ ಜಮಾ ಮಾಡಲಾಗುತ್ತಿದೆ.

ಪ್ರಯುಕ್ತ ಈ ಯೋಜನೆಗಳಡಿ ಫಲಾನುಭವಿಗಳಿಗೆ ಮಾಸಾಶನ ಮೊತ್ತವನ್ನು ಡಿಸೆಂಬರ್ 2023ರ ಮಾಹೆಯಿಂದ ಆಧಾರ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆದಂತಹ ಬ್ಯಾಂಕ್, ಅಂಚೆ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದ್ದು, ಕಳೆದ 2-3 ತಿಂಗಳಿದ ಮಾಸಾಶನ ಪಡೆಯದಂತಹ ಫಲಾನುಭವಿಗಳು ನೇರವಾಗಿ ಇತ್ತೀಚಿನ ಆಧಾರ್ ಕಾರ್ಡ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆದಂತಹ ಅಂಚೆ, ಬ್ಯಾಂಕ್ ಪುಸ್ತಕದೊಂದಿಗೆ ಸಂಬAಧಿಸಿದ ನಾಡಕಛೇರಿಯ ಉಪತಹಶೀಲ್ದಾರ್ ಅಥವಾ ತಹಶೀಲ್ದಾರ್‌ಗಳನ್ನು ತಪ್ಪದೆ ಸಂಪರ್ಕಿಸಿ, ಸರ್ಕಾರದ ಸೌಲಭ್ಯದ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";