ಚಿತ್ರದುರ್ಗ ಜಿಲ್ಲೆಯ 24 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಬಂದ ಉತ್ತಮ ಶಿಕ್ಷಕರ ಪ್ರಸ್ತಾವನೆಗಳನ್ನು ಪರಿಶೀಲನೆ ಮಾಡಿ ಜಿಲ್ಲಾ ಆಯ್ಕೆ ಸಮಿತಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರನ್ನು 2024-25ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ವಿಶೇಷ ಶಿಕ್ಷಕ ಪ್ರಶಸ್ತಿ ನೀಡಲು ಆಯ್ಕೆ ಮಾಡಲಾಗಿದೆ.

 ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷರ‍್ನು ಸೆ.05ರಂದು ಬೆಳಿಗ್ಗೆ 10ಕ್ಕೆ ನಗರದ ತರಾಸು ರಂಗಮAದಿರದಲ್ಲಿ ನಡೆಯುವ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರವದಲ್ಲಿ ಸನ್ಮಾನಿಸಲಾಗುವುದು.

ಪ್ರೌಢಶಾಲಾ ವಿಭಾಗ-6, ಹಿರಿಯ ಪ್ರಾಥಮಿಕ ಶಾಲೆ ವಿಭಾಗ-6, ಕಿರಿಯ ಪ್ರಾಥಮಿಕ ಶಾಲೆ ವಿಭಾಗ-6 ಹಾಗೂ ವಿಶೇಷ ಪ್ರಶಸ್ತಿ ವಿಭಾಗ-ಸೇರಿದಂತೆ ಒಟ್ಟು 24 ಮಂದಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 ಜಿಲ್ಲಾಮಟ್ಟದ ಉತ್ತಮ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ವಿವರ-ಪ್ರೌಢಶಾಲಾ ವಿಭಾಗ: ಚಿತ್ರದುರ್ಗ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸಹ ಶಿಕ್ಷಕ ಹೆಚ್.ಕೆ.ವಿಜಯ್ ಕುಮಾರ್, ಚಳ್ಳಕೆರೆ ತಾಲ್ಲೂಕು ಮ್ಯೆಲನಹಳ್ಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎನ್.ರಾಧಮಣಿ, ಹೊಸದುರ್ಗ ತಾಲ್ಲೂಕು ದೇವಪುರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸಹ ಶಿಕ್ಷಕ ಧನಂಜಯ, ಹೊಳಲ್ಕೆರೆ ತಾಲ್ಲೂಕು ರಂಗಾಪುರ ಸ್ವಾತಂತ್ರö್ಯ ಜ್ಯೋತಿ ಪ್ರೌಢಶಾಲೆಯ ಸಹ ಎ.ಆರ್.ಪ್ರವೀಣ್ ಕುಮಾರ್, ಚಳ್ಳಕೆರೆ ತಾಲ್ಲೂಕು ಆದರ್ಶ ವಿದ್ಯಾಲಯ ಸಹ ಶಿಕ್ಷಕ ಜಿ.ಎಂ.ವೀರಭದ್ರಪ್ಪ, ಮೊಳಕಾಲ್ಮುರು ಶ್ರೀನಿವಾಸ ನಾಯಕ ಪ್ರೌಢಶಾಲೆ ಮುಖ್ಯ ಶಿಕ್ಷಕ ಡಿ.ವಿ.ಕೃಷ್ಣಮೂರ್ತಿ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಚಿತ್ರದುರ್ಗ ತಾಲ್ಲೂಕು ಹುಲ್ಲೇಹಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಜಿ.ಟಿ.ಹನುಮಂತಪ್ಪ, ಹಿರಿಯೂರು ತಾಲ್ಲೂಕು ಕಾಟನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಿ.ಆರ್.ಶ್ರೀನಿವಾಸ, ಚಳ್ಳಕೆರೆ ತಾಲ್ಲೂಕು ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಡಿ.ಪುಷ್ಪಲತ, ಮೊಳಕಾಲ್ಮುರು ತಾಲ್ಲೂಕು ಮೊಗಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ಈಶ್ವರಪ್ಪ, ಚಳ್ಳಕೆರೆ ತಾಲ್ಲೂಕು ಹರವಿಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಹೆಚ್.ಸುರೇಶ್, ಹೊಸದುರ್ಗ ತಾಲ್ಲೂಕು ಹೇರೂರು ಸರ್ಕಾರಿ ಸಹ ಶಿಕ್ಷಕಿ ಎ.ರೂಪ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗ: ಹೊಳಲ್ಕೆರೆ ತಾಲ್ಲೂಕು ಗುಂಡೇರಿ ಸರ್ಕಾರಿ ಉರ್ದು ಕಿರಿಯ ಸಹ ಶಿಕ್ಷಕಿ ಶಕೀಲಾ ಜಾನ್, ಹಿರಿಯೂರು ತಾಲ್ಲೂಕು ಕೆ.ಎನ್.ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹೆಚ್.ಪಿ.ಸುನೀಲ್ ಕುಮಾರ್, ಚಿತ್ರದುರ್ಗ ತಾಲ್ಲೂಕು ಹಲಗಪ್ಪನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಸ್.ಸುರೇಶ್, ಹೊಳಲ್ಕೆರೆ ತಾಲ್ಲೂಕು ಬೋವಿಹಟ್ಟಿ ಅರೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಯು.ಮಹೇಶ್, ಮೊಳಕಾಲ್ಮುರು ತಾಲ್ಲೂಕು ಬಿಲಾಲ್ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಮ್.ಇಬ್ರಾಹಿಂ, ಚಳ್ಳಕೆರೆ ತಾಲ್ಲೂಕು ಗೋಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಂ.ಮಲ್ಲಿಕಾರ್ಜುನಪ್ಪ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಿಲ್ಲಾಮಟ್ಟದ ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿ: ಚಿತ್ರದುರ್ಗ ತಾಲ್ಲೂಕು ಭರಮಸಾಗರ ಶ್ರೀ ಬಾಪೂಜಿ ಪ್ರೌಢಶಾಲೆ ಸಹ ಶಿಕ್ಷಕ ಟಿ.ಸಿ.ಗೊಂಚಿಗಾರ್, ಹೊಸದುರ್ಗ ತಾಲ್ಲೂಕು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಗ್ರೇಡ್-1 ವಿ.ಮಹಂತಪ್ಪ, ಚಿತ್ರದುರ್ಗ ತಾಲ್ಲೂಕು ಕುರುಬರಹಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಉಮರ್ ಭಾಷ, ಯಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಸಿ.ಎನ್.ಮಹೇಶ್, ಮೊಳಕಾಲ್ಮುರು ತಾಲ್ಲೂಕು ಕೆರೆಕೊಂಡಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಹೆಚ್.ಓಂಕಾರಮ್ಮ, ಚಳ್ಳಕೆರೆ ತಾಲ್ಲೂಕು ಬುಕ್ಕೋರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಬಸವನಗೌಡ ಅವರು 2024-25ನೇ ಸಾಲಿನ ಜಿಲ್ಲಾಮಟ್ಟದ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";