Ad imageAd image

ಮುಡಾ ಹಗರಣದಲ್ಲಿ ಕಾನೂನು ಉಲ್ಲಂಘನೆಯಾಗಿದ್ದು ಸರ್ಕಾರವೇ ಒಪ್ಪಿಕೊಂಡಿದೆ

News Desk

ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಮುಡಾ ಹಗರಣದಲ್ಲಿ ಅಧಿಕಾರಿ ತಪ್ಪು ಮಾಡಿದ್ದಾರೆ  ಎಂದು ಸರ್ಕಾರವೇ ಅವರನ್ನು ಅಮಾನತು ಮಾಡಿದೆ. ಕಾನೂನು ಉಲ್ಲಂಘನೆ ಆಗಿರುವುದನ್ನಿ ಸರ್ಕಾರವೇ ಸ್ಪಷ್ಟವಾಗಿ ಒಪ್ಪಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಮಂಗಳೂರಿನಲ್ಲಿ ಇಂದು ದಕ್ಷಿನ ಕನ್ನಡ -ಉಡುಪಿ ವಿಧಾನಪರಿಷತ್ ಸ್ಥಾನದ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರುಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪದ ಪ್ರಕರಣ ಕೋರ್ಟ್ ನಲ್ಲಿದೆ, ಅಲ್ಲಿ ಏನು ಆಗುತ್ತೆ, ಏನು ಆಗಲ್ಲ ಅನ್ನುವುದನ್ನು ಭವಿಷ್ಯ ನುಡಿಯುವುದು ಸರಿಯಲ್ಲ. ಕೋರ್ಟ್ ನಲ್ಲಿ ತೀರ್ಮಾನ ಆಗುತ್ತದೆ. ಈ ಬಗ್ಗೆ ಪರ ವಿರೋಧ ವಾದ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸರ್ಕಾರವೇ ತಮ್ಮ ಆಜ್ಞೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಿದ್ದು, ಕಾನೂನು ಉಲ್ಲಂಘನೆ ಆಗಿದನ್ನು ಸ್ವಷ್ಟವಾಗಿ ಒಪ್ಪಿದ್ದಾರೆ. ಕೋರ್ಟ‌ನಲ್ಲಿ ಏನು ಅಂತಿಮ ತೀರ್ಪು  ಬರುತ್ತದೆ ಎಂದು ನೋಡೋಣ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಕುರಿತು ರಾಜ್ಯ ಸರ್ಕಾರ ತನಿಖೆಗೆ ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರದ ಅವಧಿಯ ಕೇಸ್‌ಗಳನ್ನು ತೆಗೆಯಲಿ, ಏನಿದ್ದರೂ ತೆಗೆಯಲಿ ಏನೇ ಇದ್ದರೂ ಎದುರಿಸಲು ಸಿದ್ದ, ಕಾನೂನು ಇದೆ ಕೋರ್ಟ್ ಇದೆ ಸೇಡಿನ ರಾಜಕೀಯ ಭಾವನೆಯಿಂದ ತೆಗೆದರೂ, ಎದುರಿಸಲು ಸಿದ್ದ ಇದ್ದೇವೆ ಏನು ಬರುತ್ತದೆ ನೋಡೋಣ ಎಂದರು.

ಶಿಕ್ಷಕ ವರ್ಗಕ್ಕೆ ಅವಮಾನ
ಹಿಜಾಬ್ ಬ್ಯಾನ್ ಮಾಡಿದ ಕುಂದಾಪುರದ ಪ್ರಾಂಶುಪಾಲರ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ತಡೆ ಹಿಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಜಾಬ್ ಶಕ್ತಿಗಳು ಇನ್ನು ಕೆಲಸ ಮಾಡುತ್ತಿದೆ, ದೇಶ ದ್ರೋಹಿ ಶಕ್ತಿ ಇನ್ನೂ ಕೆಲಸ ಮಾಡುತ್ತಿದೆ. ಅವತ್ತು ಪ್ರಾಂಶುಪಾಲರು ತಮ್ಮ ಕರ್ತವ್ಯ ಮಾತ್ರ ಮಾಡಿದ್ದರು

ಹೈಕೋರ್ಟ್ ಕೂಡ ಮಾಡಿದ್ದು ಸರಿ ಅಂತ ಹೇಳಿದೆ

ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಪೆಂಡಿಂಗ್ ಇದೆ. ಇಂತಹ ಸಂಧರ್ಭದಲ್ಲಿ ಅವರೇ ಆಯ್ಕೆ ಮಾಡಿದವರನ್ನು ಅವರೇ  ಕೊನೆಗಳಿಗೆ ಪ್ರಶಸ್ತಿ ಹಿಂದೆ ಪಡೆದದ್ದು ಸರಿಯಲ್ಲ, ಇದು ಶಿಕ್ಷಕ ವರ್ಗಕ್ಕೆ ಅವಮಾನ ಮಾಡಿದಂತಾಗುತ್ತದೆ. ಎಲ್ಲೊ ಒಂದು ಕಡೆ ಶಕ್ತಿಗಳು ಮತ್ತು ಓಲೈಕೆ ರಾಜಕಾರಣ ಹಿನ್ನೆಲೆ ಕೆಲಸ ಮಾಡಿದ್ದಾರೆ. ಜಗತ್ತಿನಲ್ಲಿ ಬದಲಾವಣೆ ಆಗುತ್ತಿರುವ ಸಂಧರ್ಭದಲ್ಲಿ ಈ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಮಧ್ಯೆ ಪ್ರವೇಶಿಸಿ ಪ್ರಶಸ್ತಿ ಕೊಡಿಸಬೇಕು. ಇಲ್ಲದೆ ಇದ್ದರೆ ಜನ ತಿರುಗಿ ಬೀಳುತ್ತಾರೆ ಎಂದು ಹೇಳಿದರು.

ರಾಜಕೀಯದ ಲೈಂಗಿಕ ದೌರ್ಜನ್ಯಗಳ ಬಗ್ಗೆಯೂ ತನಿಖೆಯಾಗಲಿ ಎಂದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲೇ ದೌರ್ಜನ್ಯ ಆಗಿದ್ದರೂ ಅದರ ಬಗ್ಗೆ ತನಿಖೆ ಆಗಲಿ. ಯಾವ ರೂಪದಲ್ಲಿ ತನಿಖೆ ಮಾಡುತ್ತಾರೋ ಅದು ಸರ್ಕಾರಕ್ಕೆ ಬಿಟ್ಟಿದ್ದು ಅದರ ಬಗ್ಗೆ ವಿಚಾರಣೆ ಆಗಬೇಕು, ಅದರ ಬಗ್ಗೆ ಸರ್ಕಾರ ನಿರ್ಧರಿಸಲಿ ಎಂದು ಹೇಳಿದರು.

ಪಕ್ಷದ ಸೂಚನೆಯಂತೆ ಅಭಿಪ್ರಾಯ ಸಂಗ್ರಹ

ದಕ್ಷಿನ ಕನ್ನಡ-ಉಡುಪಿ ವಿಧಾನಪರಿಷತ್ ಸ್ಥಾನದ ಉಪಚುನಾವಣೆ ಹಿನ್ನೆಲೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹದ ಬಗ್ಗೆ ಮಾತನಾಡಿ, ಮುಂಬರುವ ಸ್ಥಳೀಯಾಡಳಿತದ ಪರಿಷತ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇಂದು ಸಭೆ ನಡೆಸಲಾಗಿದೆ. ಮೂಲಭೂತ ತಳಹದಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಾಯಕರು, ಹಿರಿಯರ ಜೊತೆ ಚರ್ಚಿಸಿ ಯಾವ ರೀತಿ ಚುನಾವಣಾ ಪ್ರಕ್ರಿಯೆ ಮಾಡಬೇಕು ಅಂತ ಚರ್ಚಿಸುತ್ತೇವೆ.  ಈ ಬಗ್ಗೆ ವರದಿ ಕೊಡಲು ಕೋರ್ ಕಮಿಟಿಯಲ್ಲಿ ನಿರ್ಧಾರ ಆಗಿತ್ತು ಅದರಂತೆ ಮಂಗಳೂರಿಗೆ ನನ್ನನ್ನು ಕಳುಹಿಸಿ ಕೊಟ್ಟಿದ್ದಾರೆ. ಎಲ್ಲರ ಬಳಿ ಚರ್ಚಿಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದೇವೆ ಎಂದು ಹೇಳಿದರು.

- Advertisement -  - Advertisement - 
Share This Article
error: Content is protected !!
";