ಗಣೇಶ ಹಬ್ಬಕ್ಕೆ ಜಾತಿ ಮತ ಯಾವುದು ಇಲ್ಲ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಗಣೇಶ ಹಬ್ಬ ಎಂದರೆ ಒಂದು ವಿಶಿಷ್ಟವಾದ ಹಬ್ಬ ಈ ಹಬ್ಬಕ್ಕೆ ಜಾತಿ ಮತ ಯಾವುದು ಇಲ್ಲ ಎಲ್ಲರೂ ಸೇರಿ ಮಾಡುವ ಹಬ್ಬ ಒಂದು ವಿಶಿಷ್ಟವಾದ ಆಚರಣೆಯನ್ನುಬಹುದು.

ನಗರದ ಪ್ರಮುಖ ರಸ್ತೆಯ ಬದಿಯಲ್ಲಿ ಮಾರಾಟಕ್ಕೆ ಗಣೇಶನ ವಿಗ್ರಹಗಳು ಒಂದು ವಾರಕ್ಕೆ ಮುಂಚಿತವಾಗಿ ಮಾರಾಟಗಾರರು ತಂದಿಟ್ಟಿದ್ದಾರೆ. ಗುರುವಾರದಂದು ಗೌರಿ ಗಣೇಶ ಮೂರ್ತಿಗಳು ಜೋರಾಗಿ ಮಾರಾಟವಾಗಿದ್ದು  ಕಂಡು ಬಂದಿತ್ತು.

ಮಾರುಕಟ್ಟೆಗೆ ಹೆಚ್ಚಿನ ಗೌರಿ ಗಣೇಶ ಮೂರ್ತಿಗಳು ಬಂದಿದ್ದು ಮಾರಾಟ ಎಷ್ಟರ ಮಟ್ಟಿಗೆ ನಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಗೌರಿ ಹಬ್ಬ ಶುಕ್ರವಾರರುವುದರಿಂದ ಬೆಳಿಗ್ಗೆಯಿಂದಲೇ ಗೌರಿ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಗೌರಿ ಗಣೇಶ ಹಬ್ಬದ ಎಲ್ಲೆಡೆ ಸುಖಮಯವಾಗಿರಲೆಂದು ಗೌರಿ ಗಣೇಶನ ಆಶೀರ್ವಾದ ಜನರಿಗೆ ಸದಾ ಇರಲೆಂದು ಹಾರೈಸುತ್ತೇವೆ.

  

- Advertisement -  - Advertisement -  - Advertisement - 
Share This Article
error: Content is protected !!
";