ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಮುಂಡರಗಿಯ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನವು ಶಿಕ್ಷಕ ದಿನಾಚರಣೆಯ ಅಂಗವಾಗಿ ರಾಜ್ಯದ ಮೂರು
ಶಿಕ್ಷಕರಿಗೆ ,’2024ರ ಮಕ್ಕಳಸ್ನೇಹಿ ಶಿಕ್ಷಕ’ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು ಶಿವಮೊಗ್ಗದ ಲಕ್ಷ್ಮಿ ಎಸ್., ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 5000 ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಸಲಾಗಿದೆ.
ಈ ಪ್ರಶಸ್ತಿಯ ವಿಶೇಷವೆಂದರೆ,
ಯಾವುದೇ ರೀತಿ ಅರ್ಜಿ ಹಾಕಿಸಿಕೊಳ್ಳದ ರಾಜ್ಯಾದ್ಯಂತ ಇರುವ ನಮ್ಮ ಗೆಳೆಯರು, ಆಯಾ ಭಾಗದ ಅಧಿಕಾರಿಗಳು, ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಮಕ್ಕಳ ಸ್ನೇಹಿಯಾಗಿ, ನಾವಿನ್ಯಯುತ ಸೃಜನಾತ್ಮಕ ಪ್ರಯೋಗ, ಚಟುವಟಿಕೆಗಳೊಂದಿಗೆ ಕಾರ್ಯ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾ ಗುತ್ತದೆ.
ಸೆಪ್ಟೆಂಬರ್ 21 ರಂದು ಮುಂಡರಗಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಲಕ್ಷ್ಮಿ ಎಸ್ :
ಲಕ್ಷ್ಮಿಯವರು ಭದ್ರಾವತಿಯವರಾಗಿದ್ದು ಸಿರಿಗೆರೆ ಗ್ರಾಮದ ಸರಕಾರಿ
ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಂಗ ಕಲಾವಿದೆ , ನೃತ್ಯ ಹಾಗೂ ಸಂಗೀತ ಕಲಾವಿದೆಯಾಗಿ ಜನಮನ್ನಣೆ ಪಡೆದಿದ್ದು ಮಕ್ಕಳ ಸ್ನೇಹಿಯಾಗಿ ನೃತ್ಯ ಹಾಗೂ ರಂಗ ಚಟುವಟಿಕೆಗಳನ್ನು ರೂಪಿಸಿ ಮಕ್ಕಳಲ್ಲಿ ಭಾಷಾ ಪ್ರೌಢಿಮೆ ಹೆಚ್ಚಿಸಲು ಕಲಾ ಪ್ರತಿಭೆ ಹೊರಹೊಮ್ಮಿಸಲು ನಿರಂತರ ಪ್ರಯತ್ನಿಸುತ್ತ ಬಂದಿದ್ದಾರೆ. ಭಾರತಾಂಬೆ, ಮಾತೆ ಮಂಡೋದರಿ, ಶಿಕ್ಷಕಿಯಾಗಿದ್ದಾರೆ.
ಅಂಬೆ, ಕೆಳದಿ ಚೆನ್ನಮ್ಮ, ಉಡುತಡಿ ಮೊದಲಾದ ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿಯಲ್ಲೂ
ಉತ್ತಮ ಪ್ರತಿಭೆ ಮೆರೆದು ಮಕ್ಕಳ ಸ್ನೇಹಿ ಆದರ್ಶ ಶಿಕ್ಷಕಿಯಾಗಿದ್ದಾರೆ.