Ad imageAd image

ಸೆ.08ರಂದು ನೆಲ್ಲಿಕಟ್ಟೆ ಮಾರಕ್ಕಮಾತೆ ಸಂಗೀತ ಸಿರಿ ಮತ್ತು ಜ್ಞಾನಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲ್ಲಿಕಟ್ಟೆ ಮಾರಕ್ಕ ಮಾತೆ ಸೇವಾ ಸಂಸ್ಥೆ ವತಿಯಿಂದ ಚಿತ್ರದುರ್ಗ ತಾಲ್ಲೂಕು ಭರಮಸಾಗರ ಹೋಬಳಿಯ ನವಗ್ರಾಮ ನೆಲ್ಲಿಕಟ್ಟೆಯಲ್ಲಿರುವ ನೆಲ್ಲಿಕಟ್ಟೆ ಮಾರಕ್ಕ ಮಾತೆ ದೇವಾಲಯದಲ್ಲಿ ಇದೇ ಸೆಪ್ಟೆಂಬರ್ 08ರಂದು ಬೆಳಿಗ್ಗೆ 11ಕ್ಕೆ ನೆಲ್ಲಿಕಟ್ಟೆ ಮಾರಕ್ಕಮಾತೆ ಸಂಗೀತ ಸಿರಿ ಮತ್ತು ಜ್ಞಾನಸಿರಿಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ.
ಬೆಳಗಟ್ಟ ಶ್ರೀ ಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದ ಪೀಠಾಧ್ಯಕ್ಷೆ ಅಮ್ಮ ಮಹದೇವಮ್ಮ ಅಧ್ಯಕ್ಷತೆ ವಹಿಸುವರು. ಛಲವಾದಿ ಗುರುಪೀಠದ ಪೀಠಾಧ್ಯಕ್ಷ ಬಸವನಾಗಿದೇವ ಶರಣರು ದಿವ್ಯಸಾನಿಧ್ಯ ವಹಿಸುವರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉದ್ಘಾಟನೆ ನೆರವೇರಿಸುವರು.
ನಟ, ನಿರ್ದೇಶಕ, ಸಾಹಿತಿ, ಸಂಶೋಧಕ ಡಾ.ರಾಧಕೃಷ್ಣ ಪಲ್ಲಕ್ಕಿ ನೆಲ್ಲಿಕಟ್ಟೆ ಮಾರಕ್ಕಮಾತೆ ಸಂಗೀತ ಸಿರಿ ಪ್ರಶಸ್ತಿ ಪ್ರಧಾನ ಮಾಡುವರು. ಸಾಹಿತಿ ಯುಗಧರ್ಮ ರಾಮಣ್ಣ ಅವರು ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನಸಿರಿ ಪ್ರಶಸ್ತಿ ಪ್ರಧಾನ ಮಾಡುವರು. ಮುಖ್ಯ ಅತಿಥಿಗಳಾಗಿ ಲಕ್ಷಿö್ಮ ವೆಂಕಟೇಶ್ವರ ಹಾರ್ಡ್ವರ್ಸ್ ಮಾಲೀಕ ಪ್ರಹ್ಲಾದ್ ಜೆ.ನಾಡಿಗ್ ಭಾಗವಹಿಸುವರು. ಕುವೆಂಪು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಬಸವರಾಜು ಟಿ ಹುಲ್ಲೇಹಾಳು ಅವರಿಗೆ ನೆಲ್ಲಿಕಟ್ಟೆ ಮಾರಕ್ಕ ಮಾತೆ ಸಂಗೀತ ಸಿರಿ ಪ್ರಶಸ್ತಿ: 2019 ರಿಂದ ಸಂಗೀತ, ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಅನನ್ಯವೂ ಮತ್ತು ಅಪೂರ್ವವಾದ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವವರಿಗೆ ನೆಲ್ಲಿಕಟ್ಟೆ ಮಾರಕ್ಕ ಮಾತೆ ಸಂಗೀತ ಸಿರಿ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. 2024ನೇ ಸಾಲಿನ ನೆಲ್ಲಿಕಟ್ಟೆ ಮಾರಕ್ಕ ಮಾತೆ ಸಂಗೀತ ಸಿರಿಪ್ರಶಸ್ತಿಗೆ ಮೂಲತಃ ಚಿತ್ರದುರ್ಗ ತಾಲ್ಲೂಕಿನ ಹುಲ್ಲೇಹಾಳು ಗ್ರಾಮದ ಸಂಗೀತ ಕಲಾವಿದ ತಿಪ್ಪೇಸ್ವಾಮಿ ಅವರ ಮಗ ಬಸವರಾಜು ಟಿ. ಹುಲ್ಲೇಹಾಳು ಅವರು ಭಾಜನರಾಗಿದ್ದಾರೆ.
ಬಸವರಾಜು ಟಿ. ಹುಲ್ಲೇಹಾಳು ಅವರು ಬಾಲ್ಯದಿಂದಲೂ ಸಂಗೀತ ಕಲೆಯಲ್ಲಿ ನಿರತರಾದವರು. ಸ್ಯಾಕ್ಸೋಫೋನ್, ಕ್ಲಾರ್ನಿಟ್, ರಿದಮ್ಪ್ಯಾಡ್, ತಬಲ, ಡೋಲಕ್, ಹರ್ಮೋನಿಯಂ, ಕ್ಯಾಷಿಯೋ ಮೊದಲಾದ ಸಂಗೀತ ಪರಿಕರಗಳನ್ನು ನುಡಿಸುವಲ್ಲಿ ಯಶಸ್ವಿಯಾಗಿರುವ ಕಲಾವಿದರು. ರಾಜ್ಯಾದ್ಯಂತ ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಏರ್ಪಡಿಸಿದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತ ಕಲಾವಂತಿಕೆಯನ್ನು ಪ್ರದರ್ಶಿಸಿದ್ದಾರೆ.
ಹೊನ್ನೂರ್ ಸಾಬ್ ಅವರಿಗೆ ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನಸಿರಿ ಪ್ರಶಸ್ತಿ: ನೆಲ್ಲಿಕಟ್ಟೆ ಮಾರಕ್ಕ ಮಾತೆ ಜ್ಞಾನಸಿರಿ ಪ್ರಶಸ್ತಿಗೆ ಚಿತ್ರದುರ್ಗ ತಾಲ್ಲೂಕಿನ ಹುಲ್ಲೇಹಾಳು ಗ್ರಾಮದ ನಿವೃತ್ತ ಶಿಕ್ಷಕರು, ಸಂಸ್ಕೃತಿ ಚಿಂತಕರು, ಶತಾಯಿಷಿ ಹೊನ್ನೂರ್ ಸಾಬ್ ಭಾಜನರಾಗಿದ್ದಾರೆ. ಹೊನ್ನೂರು ಸಾಬ್ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಶಿಕ್ಷಕರಾಗಿ ಹಲವಾರು ಸಂಘ ಸಂಸ್ಥೆಗಳಿA ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜ್ಯ, ರಾಷ್ಟ್ರದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಭೆಗಳಲ್ಲಿ ತಮ್ಮದೇ ಆದ ವೈಚಾರಿಕ ಚಿಂತನೆಗಳನ್ನು ಮಂಡಿಸಿದ್ದಾರೆ ಎಂದು ಕಾರ್ಯದರ್ಶಿ ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ ತಿಳಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";