ಭದ್ರಾ ನೀರು ಲಿಫ್ಟ್ ಸ್ಥಗಿತ, ವಿವಿ ಸಾಗರಕ್ಕೆ ಯಾವುದೇ ನೀರಿನ ಒಳ ಹರಿವು ಇಲ್ಲ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಪುರ ಸಮೀಪದ ವಾಣಿ ವಿಲಾಸ ಜಲಾಶಯಕ್ಕೆ ಭದ್ರಾ ಡ್ಯಾಂನಿಂದ ನಿತ್ಯ 693 ಕ್ಯೂಸೆಕ್ ನೀರು ಲಿಫ್ಟ್ ಮಾಡುತ್ತಿದ್ದು ಕಳೆದ ಮೂರು ದಿನಗಳಿಂದ ಅಜ್ಜಂಪುರ ಸಮೀಪದ ಅಬ್ಬಿನಹೊಳೆ ಸಮೀಪದಲ್ಲಿನ ಪಂಪ್ ನಿಂದ ನೀರು ಲಿಫ್ಟ್ ಮಾಡುತ್ತಿಲ್ಲ.

- Advertisement - 

ಹಾಗಾಗಿ ಕಳೆದ ಮೂರು ದಿನಗಳಿಂದ ವಾಣಿ ವಿಲಾಸ ಸಾಗರಕ್ಕೆ ಯಾವುದೇ ನೀರು ಹರಿದು ಬಂದಿಲ್ಲ.
ಸೆಪ್ಟೆಂಬರ್-6 ರಂದು ಶುಕ್ರವಾರ ಎತ್ತಿನಹೊಳೆ ನೀರು ಪಂಪ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದು ಎತ್ತಿನಹೊಳೆ ನೀರು ವಿವಿ ಸಾಗರ ಸೇರಲು ವಾರ ಕಳೆಯಬೇಕಾಗಿದೆ.

- Advertisement - 

 

- Advertisement - 
Share This Article
error: Content is protected !!
";