ಚಂದ್ರವಳ್ಳಿ ನ್ಯೂಸ್, ತುಮಕೂರು:
ಹಿರೇಹಳ್ಳಿ ಎಸ್.ಬಿ.ಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ೪೫ ದಿನಗಳ ಕಂಪ್ಯೂಟರ್ ಡಿ.ಟಿ.ಪಿ. ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಅವಧಿಯಲ್ಲಿ ಉಚಿತ ವಸತಿ-ಊಟದ ವ್ಯವಸ್ಥೆ ಮಾಡಲಾಗುವುದು. ಕನ್ನಡ ಓದಲು ಹಾಗೂ ಬರೆಯಲು ಬರುವ ೧೮ ರಿಂದ ೪೫ ವಯೋಮಿತಿಯೊಳಗಿರುವ ಅರ್ಹ ಅಭ್ಯರ್ಥಿಗಳು ನೇರವಾಗಿ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕರ ಕಚೇರಿಗೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೧೬-೨೨೪೩೩೮೬, ೯೭೩೮೩೫೧೦೪೮, ೯೬೬೩೬೮೦೦೦೧ನ್ನು ಸಂಪರ್ಕಿಸಬಹುದಾಗಿದೆ ತರಬೇತಿ ಸಂಸ್ಥೆ ನಿರ್ದೇಶಕ ವಾದಿರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.