ಅಬ್ಬಿನಹೊಳೆ ಪೊಲೀಸರ ಮಿಂಚಿನ ಕಾರ್ಯಾಚರಣೆ ಶ್ರೀಗಂಧ ಕಳ್ಳರ ಬಂಧನ

News Desk

ಅಬ್ಬಿನಹೊಳೆ ಪೊಲೀಸರ ಮಿಂಚಿನ ಕಾರ್ಯಾಚರಣೆ ಶ್ರೀಗಂಧ ಕಳ್ಳರ ಬಂಧ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶ್ರೀಗಂಧ ಬೆಳೆಗಾರರ ದೂರು ಆಧರಿಸಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಶ್ರೀಗಂಧದ ಮರಗಳನ್ನು ಕಳವು ಮಾಡಿದ್ದ 4 ಮಂದಿ ಅಂತರರಾಜ್ಯ ಮತತು ರಾಜ್ಯದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯೂರು ತಾಲ್ಲೂಕು ಶ್ರೀರಂಗ ಬಡಾವಣೆ ಇಕ್ಕನೂರು-ಕುರುಬರಹಳ್ಳಿ ಗ್ರಾಮ ವಿ. ರಾಜು ತಂದೆ ಲೇಟ್ ವೆಂಕಟಪ್ಪ ಇವರಿಗೆ ಸೇರಿದ ಹಿರಿಯೂರು ತಾಲ್ಲೂಕಿನ ಇಕ್ಕನೂರು ಕುರಬರಹಳ್ಳಿ ಮಧ್ಯೆ ಇರುವ ರಿ.ಸ.ನಂಬರ್ ೧೩/೩ ರಲ್ಲಿ ೪ ಎಕರೆ ಜಮೀನಿನಲ್ಲಿ ೩೦೦ ಶ್ರೀಗಂಧದ ಸಸಿಗಳನ್ನು ಹಾಕಿದ್ದು ಇವುಗಳಲ್ಲಿ ದಿನಾಂಕ-೦೩-೦೯-೨೦೨೪ ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ೩ ಶ್ರೀಗಂಧದ ಮರಗಳನ್ನು ಕತ್ತರಿಸಿ ಮರದ ಮೇಲ್ಬಾಗ ಅಲ್ಲಿಯೇ ಬಿಟ್ಟು ಮರದ ಕಾಂಡದ ಭಾಗವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ೩ ಮರದ ತುಂಡು ಸುಮಾರು ೫೦ ರಿಂದ ೬೦ ಕೆ.ಜಿ. ತೂಕವಿದ್ದು, ಇದರ ಅಂದಾಜು ಮೌಲ್ಯ ಸುಮಾರು ೧೦೦೦೦೦ ರೂಪಾಯಿ ಆಗಿದ್ದು, ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ರೈತರು ನೀಡಿದ ದೂರಿನ ಮೇರೆಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡುವ ಸಲುವಾಗಿ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್‌ಐ ಬಾಹುಬಲಿ ಎಂ ಪಡನಾಡ, ಮಂಜುನಾಥ ಜಿ. ಹಾಗೂ ಸಿಬ್ಬಂದಿಯವರನ್ನು ಒಳಗೊಂಡ ತಂಡವು ಆರೋಪಿತರ ಕುರಿತಂತೆ ಬಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿ ಆರೋಪಿಗಳಾದ ಅನಂತಪುರ ಜಿಲ್ಲೆ ಕಲ್ಯಾಣದುರ್ಗ ತಾಲ್ಲೂಕು ಕುಂದುರ್ಪಿ ಮಂಡಲಂ ವಡ್ಡೆಪಾಳ್ಯಂ ಕೊಟ್ಟೂರಪ್ಪ ತಂದೆ ಓಬಳಪ್ಪ, ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಸಿದ್ದಣ್ಣ ಟಿ ತಂದೆ ತಿಪ್ಪೇಸ್ವಾಮಿ ಎಸ್, ಜಿಲ್ಲೆ ಕಲ್ಯಾಣದುರ್ಗ ತಾಲ್ಲೂಕು ಕುಂದುರ್ಪಿ ಮಂಡಲಂ ವಡ್ಡೆಪಾಳ್ಯಂ ಓಬಣ್ಣ ತಂದೆ ಓಬಣ್ಣ, ಈರಣ್ಣ ಆರ್ ತಂದೆ ಮಲ್ಲೇಶಪ್ಪ ಈ ನಾಲ್ಕು ಜನ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇಕ್ಕನೂರು- ಕುರುಬರಹಳ್ಳಿ ಗ್ರಾಮದ ಮಧ್ಯ ಇರುವ ವಿ ರಾಜು ರವರ ಜಮೀನಿನಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸದರಿಯವರ ಕಡೆಯಿಂದ ಸುಮಾರು ೬೦,೦೦೦ ರೂಪಾಯಿ ಮೌಲ್ಯದ ೩೦ ಕೆ.ಜಿ. ೬೪೦ ಗ್ರಾಂ ತೂಕದ ಶ್ರೀಗಂಧದ ಮರದ ತುಂಡುಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ೨ ಗರಗಸ, ೧ ಬಾಚಿ, ೨ ಮೋಟಾರ್ ಸೈಕಲ್‌ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.
ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿ.ಎಸ್.ಐ. ಬಾಹುಬಲಿ ಎಂ ಪಡನಾಡ ಮತ್ತು ಮಂಜುನಾಥ ಜಿ. ಹಾಗೂ ಸಿಬ್ಬಂದಿಯವರಾದ ನಾಗರಾಜ್, ನಿಂಗರಾಜು, ದೇವೆಂದ್ರಪ್ಪ, ದಾದಾ ಖಲಂದರ್, ನಾಗಣ್ಣ, ನಾಗರಾಜ ಮತ್ತು ರುದ್ರೇಶ ರವರುಗಳ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

- Advertisement -  - Advertisement -  - Advertisement - 
Share This Article
error: Content is protected !!
";