ಎಫ್ ಐ ಆರ್ ನೋಡಿ ಹೆಚ್ ಡಿ ಕೆ ಕೆಂಡಾಮಂಡಲ

News Desk

ಚಂದ್ರವಳ್ಳಿ ನ್ಯೂಸ್, ಮಂಡ್ಯ :
ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕೋಮುಗಲಭೆಯಾದ ಸ್ಥಳಕ್ಕೆ ಭೇಟಿಯಾದ ಕೇಂದ್ರ ಸಚಿವ ಮತ್ತು ಸ್ಥಳೀಯ ಸಂಸದ ಎಚ್ ಡಿ ಕುಮಾರಸ್ವಾಮಿ ಎಫ್ಐಆರ್ ನಲ್ಲಿ ದಾಖಲಾದ ಹೆಸರುಗಳನ್ನು ನೋಡಿ ಕೆಂಡಾಮಂಡಲರಾದರು.

 ಕೋಮುಗಲಭೆಯಾದ ಸ್ಥಳಕ್ಕೆ ಇಂದು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ ಎಚ್ ಡಿ ಕುಮಾರಸ್ವಾಮಿ, ಪೊಲೀಸರು ದಾಖಲಿಸಿ ಎಫ್ಐಆರ್ ಲಿಸ್ಟ್ ನೋಡಿ ಸಿಟ್ಟಾದರು. ಈ ಲಿಸ್ಟ್ ನಲ್ಲಿ ನಿಜವಾಗಿ ಗಲಾಟೆಗೆ ಕಾರಣರಾದವರ ಹೆಸರಿಲ್ಲ. ಘಟನೆಯಲ್ಲಿ ಪೊಲೀಸರ ತಪ್ಪೂ ಇದೆ. ಎಷ್ಟು ಪೊಲೀಸರ ಹೆಸರು ಹಾಕಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಈ ಎಫ್ ಐಅರ್ ಲಿಸ್ಟ್ ನೋಡಿದರೆ ನ್ಯಾಯಾಲಯ ಏನು ಹೇಳುತ್ತದೋ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ನಿಜವಾಗಿ ಗಲಾಟೆಗೆ ಯಾರು ಕಾರಣರಾಗುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾನು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಸಿಕ್ಕ ಸಿಕ್ಕವರ ಮೇಲೆ ಪ್ರಕರಣ ದಾಖಲಿಸಬೇಡಿ. ಇದರಿಂದ ಅವರ ಕುಟುಂಬಗಳಿಗೂ ತೊಂದರೆಯಾಗುತ್ತಿದೆ ಎಂದರು.

ಇನ್ನು, ಈ ಪ್ರಕರಣವನ್ನು ಇಷ್ಟಕ್ಕೇ ನಿಲ್ಲಿಸಲ್ಲ. ನಾನು ಯಾವತ್ತೂ ಒಂದು ಸಮುದಾಯವನ್ನು ಓಲೈಸಲಿಲ್ಲ. ಎಲ್ಲಾ ಸಮುದಾಯದವರನ್ನೂ ಸಮಾನವಾಗಿ ನೋಡುತ್ತಾ ಬಂದಿದ್ದೆ. ನಿಮ್ಮ ರಾಜಕೀಯ ಉದ್ದೇಶಕ್ಕಾಗಿ ಎರಡು ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

- Advertisement -  - Advertisement - 
Share This Article
error: Content is protected !!
";