ಕ್ಷೇತ್ರದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವೆ-ಸಚಿವ ಸುಧಾಕರ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:

ಹಿರಿಯೂರು ತಾಲೂಕಿನ ಯರಬಳ್ಳಿ ಸರ್ಕಾರಿ ಪದವ ಪೂರ್ವ ಕಾಲೇಜ್ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯಾಸಂಗದ ಹಿತದೃಷ್ಟಿಯಿಂದ ಎರಡು ಕೊಠಡಿಗಳ ಶಂಕು ಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸು ಈ ಸುಧಾಕರ್ ನೆರವೇರಿಸಿದರು.

ನಂತರ ಮಾತನಾಡಿದ ಸುಧಾಕರ್, ಇಡೀ ಕ್ಷೇತ್ರದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುವುದಲ್ಲದೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಂದಿಕೆರೆ ಎಸ್ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ, ಲತಾ, ಪಾಲಯ್ಯ, ಕವಿತಾ ನಾಗರಾಜ್, ಕಂದಿಕೆರೆ ಸುರೇಶ್ ಬಾಬು, ಜೈಕುಮಾರ್, ರಂಗನಾಥ್, ಓಂಕಾರಪ್ಪ, ಪ್ರಾಂಶುಪಾಲ ನಾಗರಾಜ್, ಉಪನ್ಯಾಸಕಿ ಧನಲಕ್ಷ್ಮಿ, ಹಿರಿಯ ಸಹ ಶಿಕ್ಷಕ ಎಚ್ ಇ ರಾಜಪ್ಪ, ಪಂಚಾಯತಿ ಕಾರ್ಯದರ್ಶಿ ತಿಪ್ಪೇಸ್ವಾಮಿ, ಗ್ರಂಥಪಾಲಕ ಯರಬಳ್ಳಿ ರಾಜಣ್ಣ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು.

 

 

 

- Advertisement -  - Advertisement -  - Advertisement - 
Share This Article
error: Content is protected !!
";