ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಜ್ಞಾನ ಭಾರತಿ ಶಾಲೆ ಮುಂಭಾಗ ಹಾಡಹಗಲೇ ಮುಸ್ಲಿಂ ಬಾಲಕಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ ಇಬ್ಬರು ಕಿರಾತಕರನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿರುವ ಘಟನೆ ನಡೆದಿದೆ.
ಕಿರಾತಕರಿಬ್ಬರು ಬಾಲಕಿಯನ್ನು ಎಳೆದೊಯ್ಯುವಾಗ ಕಿರುಚಾಡಿದ್ದಾಳೆ.
ಇದರಿಂದ ಬೆದರಿದ ಇಬ್ಬರು ಬಾಲಕಿಯನ್ನು ಬಿಟ್ಟು ಎಸ್ಕೇಪ್‌ಆಗಲು ಯತ್ನಿಸಿದ್ದಾರೆ. ಬಾಲಕಿ ಕಿರುಚಾಟ ಕೇಳಿದ ಸ್ಥಳೀಯರು ಕೂಡಲೇ ಓರ್ವನನ್ನು ಹಿಡಿದು ಥಳಿಸಿದ್ದಾರೆ. ಟಗರುಹಟ್ಟಿಯ ಆರೋಪಿ ಪಾರ್ಥ ಎಂಬಾತನನ್ನು ಹಿಡಿದು ಸ್ಥಳೀಯರು ಧರ್ಮದೇಟು ನೀಡಿದ್ದಾರೆ.
ಇತ್ತ ಸ್ಥಳದಲ್ಲೇ ಇದ್ದ ಬಾಲಕಿ ಚಪ್ಪಲಿ ಹಿಡಿದು ಮನಬಂದಂತೆ ಹೊಡೆದಿದ್ದಾಳೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 17 ವರ್ಷದ ಬಾಲಕಿಯನ್ನುಆರೋಪಿ ಆನಂದ್ ಮತ್ತು ಪಾರ್ಥ ಎಂಬುವವರು ಕಿಡ್ನ್ಯಾಪ್ ಮಾಡಲು ಯತ್ನಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಿಡ್ನ್ಯಾಪ್‌ಮಾಡಲು ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿಯಿಂದ ದೂರು ದಾಖಲಾಗಿದೆ. ಹಾಡಹಗಲೇ ಬಾಲಕಿಯ ಅಪಹರಣಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾಠಾಣೆಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಆಗಮಿಸಿ ಪರಿಶೀಲನೆ ಮಾಡಿದರು.