Ad imageAd image

ಸಂಶೋಧನೆ, ನಾವಿನ್ಯತೆ ಕೋಶ, ಟೆಲಿಕಾಮ್ ಸೆಂಟರ್ಸ್ ಆಫ್ ಎಕ್ಸ್ಲೈನ್ಸ್ ನಡುವೆ ಒಪ್ಪಂದ ಪತ್ರಕ್ಕೆ ಸಹಿ

News Desk

ಸಂಶೋಧನೆ, ನಾವಿನ್ಯತೆ ಕೋಶ, ಟೆಲಿಕಾಮ್ ಸೆಂಟರ್ಸ್ ಆಫ್ ಎಕ್ಸ್ಲೈನ್ಸ್ ನಡುವೆ ಒಪ್ಪಂದ ಪತ್ರಕ್ಕೆ ಸಹಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ನಾವಿನ್ಯತೆ ಕೋಶ (VRIF) ಹಾಗೂ ಟೆಲಿಕಾಮ್ ಸೆಂಟರ್ಸ್ ಆಫ್ ಎಕ್ಸ್ಲೈನ್ಸ್ (TCOE) ನಡುವೆ ತಿಳುವಳಿಕೆ ಒಪ್ಪಂದ ಪತ್ರಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿದ್ಯಾಶಂಕರ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವ ಡಾ.ಬಿ.ಇ.ರಂಗಸ್ವಾಮಿ, ಡಿಡಿಜಿ (ಎಸ್ಆರ್ಐ) ಡಿಒಟಿಸಿ ವಿನೋದ್ ಕುಮಾರ್, ಟಿಸಿಒಇ ನಿರ್ದೇಶಕ ಡಾ.ಅನುರಾಗ್ ವಿಭೂತಿ ಇವರು ಸಹಿ ಮಾಡಿದರು.

ವಿಟಿಯು-ವಿಆರ್ಐಎಫ್ (ವಿಶ್ವೇಶ್ವರಯ್ಯ ರಿಸರ್ಚ್ ಅಂಡ್ ಇನ್ನೋವೇಶನ್ ಫೌಂಡೇಶನ್) ಮತ್ತು ಟಿಸಿಒಇ ನಡುವೆ ತಿಳುವಳಿಕಾ ಒಡಂಬಡಿಕೆಗೆ ಭಾರತದ ನಾಯಕತ್ವವನ್ನು ಗಮನಾರ್ಹವಾಗಿ ಮುನ್ನಡೆಸುವ ಪಾಲುದಾರಿಕೆಯನ್ನು ಔಪಚಾರಿಕಗೊಳಿಸುತ್ತದೆ.
5 ಜಿ / 6 ಜಿ, ಕ್ವಾಂಟಮ್ ಕಂಪ್ಯೂಟಿಂಗ್, ಎಐ ಮತ್ತು ಹೆಚ್ಚಿನವುಗಳಲ್ಲಿ ಈ ಸಹಯೋಗವು ಕೇವಲ ನಿರ್ಣಯಕವಲ್ಲ. ಕರ್ನಾಟಕ ಮಾತ್ರವಲ್ಲ, ಭಾರತದ ವಿಶಾಲವಾದ ನಾವೀನ್ಯತೆ ಪರಿಸರ ವ್ಯವಸ್ಥೆಗಾಗಿ ಇದು ದೃಢವಾದ ವೇದಿಕೆಗೆ ಶೈಕ್ಷಣಿಕ-ಉದ್ಯಮ ಇಂಟರ್ಫೇಸ್ ವೇದಿಕೆಯನ್ನು ಒದಗಿಸುವುದು ಒಡಂಬಡಿಕೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ.

ಬೆಂಗಳೂರಿನ ರ್ಯಾಡಿಸನ್ ಬ್ಲೂ (ಏಟ್ರಿಯಾ ಹೋಟೆಲ್) ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಡಿಒಟಿಸಿ ಯ ಡಿಡಿಜಿ (ಎಸ್ಆರ್ಐ), ನಿರ್ದೇಶಕರು ಟಿಸಿಒಇ ಹಾಗೂ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ ಪ್ರಾಂಶುಪಾಲರುಗಳು, ಹಿರಿಯ ಅಧಿಕಾರಿಗಳು, ಟಿಸಿಒಇ ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

- Advertisement -  - Advertisement - 
Share This Article
error: Content is protected !!
";