ಗಣಪತಿ ವಿಸರ್ಜನೆ ವೇಳೆ ತಂದೆ ಮಗ ಸೇರಿ ಮೂವರು ನೀರು ಪಾಲು
ಚಂದ್ರವಳ್ಳಿ ನ್ಯೂಸ್, ತುರುವೇಕೆರೆ:
ಗಣಪತಿ ವಿಸರ್ಜನೆ ವೇಳೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ತುರುವೇಕೆರೆ ತಾಲ್ಲೂಕಿನ ರಂಗನಹಟ್ಟಿಯಲ್ಲಿ ನಡೆದಿದೆ.
ಗಣೇಶನ ವಿಸರ್ಜನೆ ಮಾಡಲು ಶರತ್, ದಯಾನಂದ್ ನೀರಿಗೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಕೆಸರು ಜಾಸ್ತಿ ಇದ್ದು, ಅವರ ಕಾಲುಗಳು ಹೂತಿವೆ. ಪರಿಣಾಮ ನೆರವಿಗಾಗಿ ಕೂಗಿದ್ದಾರೆ.
ಈ ವೇಳೆ ಶರತ್‌ರ ತಂದೆ ರೇವಣ್ಣ ನೀರಿಗೆ ಇಳಿದಿದ್ದಾರೆ. ಆದರೆ ಮೂವರಿಗೂ ಮೇಲಕ್ಕೆ ಬರಲಾಗದೆ ಸಾವನ್ನಪ್ಪಿದ್ದಾರೆ.