ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸಭೆ

News Desk

ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸಭೆ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು,ತೂಬಗೆರೆ ಹೋಬಳಿ ಹಾಡೋನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಮುನೇಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷ ಮುನೇಗೌಡ ಸಂಘದಲ್ಲಿ ಇದುವರೆಗು 334 ಜನ ರೈತರಿಗೆ 2 ಕೋಟಿ 68 ಲಕ್ಷ 60 ಸಾವಿರ ಬೆಳೆ ಸಾಲವನ್ನು ನೀಡಿದ್ದೇವೆ,92 ಜನ ರೈತರಿಗೆ 74 ಲಕ್ಷ ಸಾಲವನ್ನು ಮಂಜೂರಾತಿ ಪ್ರಸ್ತಾವನೆ ಕಳಿಸಿದ್ದೇವೆ, ಸಂಘದ ಎಲ್ಲಾ ಸದಸ್ಯರಿಗೆ ಉಚಿತವಾಗಿ ಸಂಘದ ಗುರುತಿನ ಚೀಟಿಯನ್ನು ವಿತರಣೆ ಮಾಡಿದ್ದೇವೆ, ಸಂಘಕ್ಕೆ ನೂತನವಾಗಿ ಹತ್ತುಗುಂಟೆ ಜಾಗಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಮುಂದಿನ ದಿನಗಳಲ್ಲಿ ಎಷ್ಟೇ ಜನ ರೈತರು ಬಂದರೂ ನಮ್ಮ ಸಂಘದಲ್ಲಿ ನಾವು ಸಾಲವನ್ನು ನೀಡುತ್ತೇವೆ ಎಂದು ಹೇಳಿದರು,

ಬಿ.ಡಿ.ಸಿ.ಸಿ ಬ್ಯಾಂಕ್ ನ ಮೇಲ್ವಿಚಾರಕ ನಾಯಕ್.ಆರ್.ರಂಗಸ್ವಾಮಿ ಮಾತನಾಡಿ, ಹಾಡೋನಹಳ್ಳಿ ಸಂಘದ ವ್ಯಾಪ್ತಿಗೆ ಬರುವ ಎಲ್ಲಾ ರೈತರಿಗೆ ಹೆಚ್ಚಾಗಿ ಸಾಲವನ್ನು ಕೊಡುತ್ತಿದ್ದೇವೆ ಹಾಗೂ ಶ್ರೀ ಶಕ್ತಿ ಸಂಘಗಳಿಗೆ ಸಾಲವನ್ನು 5 ಲಕ್ಷದವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ವಿಜಯಕುಮಾರ್, ನಿರ್ದೇಶಕ ಶ್ರೀಧರ್, ಪಿಳ್ಳಪ್ಪ, ಎಚ್.ಎನ್. ಹನುಮಂತರಾಯಪ್ಪ, ಎನ್. ಮುನಿರಾಜು, ವಿ. ವೆಂಕಟೇಶ್, ನಂಜೇಗೌಡ, ಅನುಸೂಯಮ್ಮ, ಗಂಗಲಕ್ಷ್ಮಮ್ಮ, ರಾಮನಾಯಕ್, ಲೋಕನಾಥ್, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಎಂ.ಸಂಜಯ್ ಹಾಜರಿದ್ದರು.

- Advertisement -  - Advertisement - 
Share This Article
error: Content is protected !!
";