ಸೆ. 18 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಇದೇ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಉಚ್ಛನ್ಯಾಯಾಲಯ ಹಾಗೂ ಕೆಎಸ್ಟಿಎಟಿ ಮರುಪರಿಗಣನೆಗೆ ಸ್ವೀಕೃತವಾದ ವಿಷಯಗಳು ಹಾಗೂ ಖಾಸಗಿ ಕಾರ್ಯಕರ್ತರು ಸಲ್ಲಿಸಿರುವ ರಹದಾರಿ ವರ್ಗಾವಣೆ, ವ್ಯತ್ಯಯ ಹಾಗೂ ಇನ್ನಿತರ ವಿಷಯಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಭೆ ಆಯೋಜಿಸಲಾಗಿದೆ.
ಸಭೆಗೆ ಸಂಬಂಧಪಟ್ಟ ಅರ್ಜಿದಾರರಾಗಲಿ ಅಥವಾ ಅಧಿಕೃತ ಪ್ರತಿನಿಧಿಗಳು ಹಾಜರಾಗುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.